ಬಳ್ಳಾರಿ: ಡಿಕೆಶಿ ಪ್ರಭಾವಿ ಸಚಿವರಾಗಿರಬಹುದು, ಅವರ ಬಳಿ ಸರ್ಕಾರವೇ ಇರಬಹುದು. ಆದರೆ ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಟ್ಟಿಯಲ್ಲಿ ಹಿರಿಯ ನಾಯಕರಾಗಿರಬಹುದು. ಅವರ ಹತ್ತಿರ ಸರ್ಕಾರ ಇರಬಹುದು. ಅಷ್ಟೇ ಅಲ್ಲದೇ ಅಧಿಕಾರ, ಹಣದ ಬಲ ಎಲ್ಲಾ ಇರಬಹುದು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ನಾಯಕರು ಬೂತ್ ಬಳಿಯೇ ಬಂದು ಕುಳಿತರೂ ಸಹ ನಮ್ಮ ಕಾರ್ಯಕರ್ತರ ಬಳಿ ನಮ್ಮದೇ ಆದ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಬಳ್ಳಾರಿಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ನಾಲ್ಕು ದಶಕಗಳ ಕಾಲ ಬಿಜೆಪಿಯ ಭದ್ರ ಕೋಟೆಯಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಾವು ಪ್ರಚಾರ ಮಾಡುತ್ತೇವೆ. ಲೋಕಸಭಾ ಉಪಚುನಾವಣೆಗೆ 7-8 ಜನ ಆಕಾಂಕ್ಷಿಗಳಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ ಅವರ ಮಗ ಎನ್ ವೈ ಸುಜಯ್‍ಕುಮಾರ್ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಆಕಾಂಕ್ಷಿಗಳ ಹೆಸರನ್ನ ರಾಜ್ಯಾಧ್ಯಕ್ಷರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಡಿಕೆಶಿ ವರ್ಸಸ್ ಶ್ರೀರಾಮುಲು ಅಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆ ಎದುರಿಸುತ್ತೇವೆ ಎಂದರು. ಇದನ್ನು ಓದಿ: ರಾಜಕೀಯ ಗುರುವಿನ ಪುತ್ರನನ್ನ ಕಣಕ್ಕೆ ಇಳಿಸಲು ಸಜ್ಜಾದ ರೆಡ್ಡಿ-ರಾಮುಲು!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv