ಕೊಪ್ಪಳ: ರಾಜ್ಯದ ಮುಖ್ಯಮಂತ್ರಿಯವರಿಗೆ ಕೆಲ ಬೆಳವಣಿಗೆಯಿಂದ ಎಲ್ಲೋ ಒಂದು ಕಡೆ ಮನಸ್ಸಿಗೆ ನೋವಾಗಿರಬಹುದು. ಅದಕ್ಕೆ ಕಣ್ಣೀರು ಹಾಕಿರಬಹುದು. ಹಾಕ್ಲಿ ಬಿಡಿ ಅಂತ ಶಾಸಕ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿರುವ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕೆಲ ಬೆಳವಣಿಗೆಯಿಂದ ಅವರಿಗೆ ನೋವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿರಬಹುದು. ಆದ್ರೆ. ಸಿಎಂ ಆಗಿದ್ದವರು ಕಣ್ಣೀರು ಹಾಕುವುದು ಸರಿಯಲ್ಲ ಅಂತ ಹೇಳಿದರು.
Advertisement
ಸಚಿವ ಡಿಕೆ ಶಿವಕುಮಾರ್ ಸಂಸದರಿಗೆ ಐಫೋನ್ ಮತ್ತು ಬ್ಯಾಗ್ ಗಿಫ್ಟ್ ಕೊಟ್ಟ ವಿಚಾರದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಗಾಂಧಿ ಸಿದ್ಧಾಂತ ಹೇಳಿಕೊಂಡು ಬಂದಿದ್ದ ಪಕ್ಷ. ಜೊತೆಗೆ ಈಗ ರಾಜ್ಯದ ಎಲ್ಲ ವರ್ಗದ ಜನ ತೊಂದರೆಯಲ್ಲಿದ್ದಾರೆ. ಇಂಥ ಸಂಧರ್ಭದಲ್ಲಿ ದೊಡ್ಡ ಮೊತ್ತದ ಗಿಫ್ಟ್ ನೀಡಿ ದುಂದು ವೆಚ್ಚ ಮಾಡುವುದ ಎಷ್ಟು ಸರಿ ಅಂತ ಪ್ರಶ್ನಿಸಿದ್ರು. ಇದನ್ನೂ ಓದಿ: ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು
Advertisement
Advertisement
ಇದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವಂತದಲ್ಲ. ಬಿಜೆಪಿ ಪಕ್ಷದ ಸಂಸದರೆಲ್ಲ ಗಿಫ್ಟ್ ವಾಪಸ್ ನೀಡಿದ್ದಾರೆ. ಗಿಫ್ಟ್ ವಾಪಸ್ ನೀಡಿದ ಬಿಜೆಪಿ ಸಂಸದರಿಗೆ ಅಭಿನಂದನೆ ಸಲ್ಲಿಸುವೆ ಅಂತ ಅವರು ಹೇಳಿದ್ರು.
Advertisement
ಇತ್ತೀಚೆಗೆ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದರು. ಈ ವಿಚಾರ ದೇಶಾದ್ಯಂತ ಚರ್ಚೆಯಾಗಿದ್ದು, ಸಿಎಂ ಸ್ಪಷನೆ ಕೂಡ ನೀಡಿದ್ದರು. ನನ್ನ ಕುಟುಂಬ ಕಾರ್ಯಕ್ರಮದಲ್ಲಿ ನನ್ನಲ್ಲಿರುವಂತಹ ಕೆಲವೊಂದು ನೋವುಗಳನ್ನು ಹೇಳುತ್ತಿರಬೇಕಾದ್ರೆ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದು ನಿಜ ಅಂತ ಹೇಳಿದ್ದರು. ಇದನ್ನೂ ಓದಿ: ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ
ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಅದರ ಹಿನ್ನೆಲೆಯಲ್ಲಿ ನನ್ನ ಕುಟುಂಬದ ಸದಸ್ಯರ ಜೊತೆ ನನ್ನ ಕೆಲವೊಂದು ನೋವಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿರಬೇಕಾದ್ರೆ ಕಣ್ಣಲ್ಲಿ ನೀರು ಹಾಕಿರುವುದು ಸಹಜ ಅಂತ ಸ್ಪಷ್ಟಪಡಿಸಿದ್ದರು.
https://www.youtube.com/watch?v=qvlVtigAGiU