Connect with us

Bengaluru Rural

ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಶ್ರೀನಿವಾಸಮೂರ್ತಿಯ ಗಾನ ಭಜಾನಾ

Published

on

ಬೆಂಗಳೂರು: ನೆಲಮಂಗಲದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಮೂರ್ತಿ ಅವರು ಸಖತ್ ಹಾಡು, ಮನರಂಜನೆ ಮೂಲಕ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಇಮಚೇನಹಳ್ಳಿಯಲ್ಲಿ ಸಿದ್ಧಿ ವಿನಾಯಕರ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವನ್ನು ಆಯೋಜಿಸಲಾಗಿತ್ತು. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಕೆ. ಶ್ರೀನಿವಾಸಮೂರ್ತಿಯಿಂದ ಗಾನ ಬಜಾನ ಬಲು ಜೋರಾಗಿತ್ತು. ವರನಟ ಡಾ. ರಾಜ್‍ಕುಮಾರ್ ಅಭಿನಯದ ‘ಬಂಗಾರದ ಹೂವು’ ಚಿತ್ರದ ‘ಓಡುವ ನದಿ ಸಾಗರವ ಸೇರಬೇಕು’ ಎಂಬ ಹಾಡನ್ನು ಹಾಡಿ ಶಾಸಕರು ಪ್ರೇಕ್ಷಕರನ್ನು ರಂಜಿಸಿದರು.

ಶಾಸಕರ ಸಖತ್ ಹಾಡಿಗೆ ಗ್ರಾಮಸ್ಥರು ಖುಷಿ ಪಟ್ಟರು. ಶಾಸಕರ ಹಾಡಿಗೆ ಜನರಿಂದ ಶಿಳ್ಳೆ, ಚಪ್ಪಾಳೆ, ಜೋರಾಗಿ ಕೇಳಿಬಂದಿದ್ದು, ವೇದಿಕೆಯಲ್ಲಿ ಕುಳಿತಿದ್ದ ಗಣ್ಯರು ಮತ್ತು ಜನ ಪ್ರತಿನಿಧಿಗಳು, ಶಾಸಕರ ಹಾಡಿಗೆ ತಲೆದೂಗಿದರು.

Click to comment

Leave a Reply

Your email address will not be published. Required fields are marked *