ರಾತ್ರೋ ರಾತ್ರಿ ಪಟ್ಟೆಗಾರ ಪಾಳ್ಯದ ದೇವಸ್ಥಾನ ಕೆಡವಿಸಿದ ಶಾಸಕ ವಿ.ಸೋಮಣ್ಣ

Public TV
1 Min Read
TEMPLE SOMANNA

ಬೆಂಗಳೂರು: ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸೋಮಣ್ಣ ಸಂಬಂಧಿಕರ ಶಾಲೆಯ ಜಾಗವನ್ನು ರಕ್ಷಿಸಲು ಹೋಗಿ ರಾತ್ರೋ ರಾತ್ರಿ ದೇವಸ್ಥಾನ ಕೆಡವಿಸಿದ್ದಾರೆಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.

ನಗರದ ಪಟ್ಟೆಗಾರ ಪಾಳ್ಯದಲ್ಲಿರುವ ಕರಿ ಮಾರಿಯಮ್ಮ ದೇವಸ್ಥಾನವನ್ನು ಮಂಗಳವಾರ ತಡರಾತ್ರಿ ಶಾಸಕರ ಬೆಂಬಲಿಗರು ಕೆಡವಿ ಹೋಗಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ಇರುವ ಶಾಸಕ ಸೋಮಣ್ಣ ಸಂಬಂಧಿಕರ ಸೆಂಟ್ ಪೌಲ್ ಶಾಲೆಗೆ ದೇವಸ್ಥಾನದ ಜಾಗ ಬಿಟ್ಟುಕೊಡುವಂತೆ ಕಳೆದ ಒಂದು ತಿಂಗಳ ಹಿಂದೆ ತಮ್ಮ ವಿಧಾನಸೌಧದ ಕಚೇರಿಯಲ್ಲೇ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಕೂಡ ಹಾಕಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

vlcsnap 2018 08 22 09h03m03s843

ಮಾಧ್ಯಮಗಳಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಸೇಡಿನ ರಾಜಕಾರಣ ಮಾಡಿ ರಾತ್ರೋ ರಾತ್ರಿ ತಮ್ಮ ಬೆಂಬಲಿಗರಿಂದ ದೇವಸ್ಥಾನವನ್ನು ಕೆಡವಿ ಹಾಕಿಸಿದ್ದಾರೆಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ಲದೇ ಶಾಸಕರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article