– ಸೋಮವಾರ ಸಂಜೆ ಬೆಂಗಳೂರಿಗೆ ಆಗಮನ
– ಇಂದು ಸಂಜೆ ಕೆನ್ನಾಲಿಗೆಗೆ ಭಾಗ್ಯರೇಖಾ ಬಲಿ
– ಇಂದು ಸಂಜೆ ಕೆನ್ನಾಲಿಗೆಗೆ ಭಾಗ್ಯರೇಖಾ ಬಲಿ
ಬೆಂಗಳೂರು: ಬೊಮ್ಮನಹಳ್ಳಿ ಅಪಾರ್ಟ್‍ಮೆಂಟ್ ನಲ್ಲಿ ಅಗ್ನಿ ದುರಂತವಾಗಿದ್ದು, ಈ ಹಿನ್ನೆಲೆ ನನಗೆ ತುಂಬಾ ನೋವಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಅಗ್ನಿ ದುರಂತ ಸಂಜೆ 4:15 ರಿಂದ 4:30ರ ವೇಳೆ ಘಟನೆ ನಡೆದಿದೆ. ಲಕ್ಷ್ಮಿದೇವಿ(82), ಭಾಗ್ಯರೇಖಾ(59) ಮೃತಪಟ್ಟಿದ್ದಾರೆ. ಅಮೆರಿಕದಲ್ಲಿದ್ದ ಮಗಳ ಮನೆಯಿಂದ ಭಾಗ್ಯರೇಖಾ ಮತ್ತು ಪತಿ ಭೀಮಸೇನ್ ಬೆಂಗಳೂರಿಗೆ ನಿನ್ನೆ ಸಂಜೆ ಬಂದಿದ್ದರು. ಅವರು 210 ಫ್ಲಾಟ್ ನಲ್ಲಿ ಇದ್ದರು. ಪಕ್ಕದ 211 ಅವರ ಮಗಳು ವಾಸವಾಗಿದ್ದರು. ಎರಡು ಮನೆ ಅಕ್ಕ ಪಕ್ಕದಲ್ಲಿ ಇದೆ. ಭೀಮಸೇನ್ ಅವರು ಮಗಳ ಫ್ಲಾಟ್ ನಲ್ಲಿ ಮಲಗಿಕೊಂಡಿದ್ದರು. ಈ ಕಡೆ ಅವರ ಭಾಗ್ಯರೇಖಾ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಿದ್ದರು. 6 ತಿಂಗಳಿಂದ ಇವರು ಮನೆಯಲ್ಲಿ ಇಲ್ಲದ ಕಾರಣ ಈ ಘಟನೆ ಗ್ಯಾಸ್ ನಿಂದ ಆಗಿದ್ಯಾ? ಅಥವಾ ವಿದ್ಯುತ್‍ನಿಂದ ದುರಂತವಾಗಿದ್ಯಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕ್ರಮವಹಿಸಬೇಕು: ಕಾರಜೋಳ
Advertisement
Advertisement
ಭೀಮ್ ಸೇನ್ ಅವರು ತಮ್ಮ ಮಗಳು ಪ್ರೀತಿ ಸಂತೋಷ ಅವರ ಮನೆಯಲ್ಲಿ ಇದ್ದಾಗ ಲಕ್ಷ್ಮಿ ಅವರು ಕರೆ ಮಾಡಿ ಬೆಂಕಿ ಬಗ್ಗೆ ಹೇಳಿದ್ದಾರೆ. ತಕ್ಷಣ ಅವರು ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದು, ಅವರಿಗೂ ಗಾಯಗಳಾಗಿವೆ. ಈ ವಿಷಯ ತಿಳಿದು ಭೀಮಸೇನ್ ಅವರು ಶಾಕ್ ನಲ್ಲಿದ್ದಾರೆ. ಅವರ ಕುಟುಂಬದವರ ಜೊತೆಗೆ ನಾನು ಮಾತನಾಡಿದ್ದೇನೆ. ಇದು ಅವರ ಕುಟುಂಬಕ್ಕೆ ನೋವು ತರುವಂತದ್ದು, ಅವರಿಗೆ ಎಷ್ಟೇ ನಾವು ಸಾಂತ್ವನ ಹೇಳಿದರೂ ಅದು ಸಾಲದು. ನಾನು ಈ ಬಗ್ಗೆ ನ್ಯೂಸ್ ನಲ್ಲಿ ನೋಡಿದಾಗ ತಕ್ಷಣ ವಿಧಾನ ಸಭೆ ಒಳಗಡೆಯೇ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ. ಈ ದುರಂತದ ವೀಡಿಯೋವನ್ನು ನೋಡಿ ಸಿಎಂ ಅವರು ಅಘಾತವನ್ನು ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ
Advertisement
ಮಹಿಳೆ ತನ್ನ ಜೀವವನ್ನು ಉಳಿಸಿಕೊಳ್ಳಲು ಮಾಡುತ್ತಿದಂತಹ ಪ್ರಯತ್ನ ನೋಡಿದರೆ ನಿಜವಾಗಲೂ ತುಂಬಾ ನೋವು ತರುವಂತಹದ್ದು, ಎಂದು ಬೊಮ್ಮಾಯಿ ಅವರು ನೋವನ್ನು ವ್ಯಕ್ತಪಡಿಸಿದ್ದಾರೆ. ನಂತರ ಗೃಹಮಂತ್ರಿ ಅವರಿಗೂ ಈ ಸುದ್ದಿ ತಿಳಿಸಿ ತಕ್ಷಣ ಅಲ್ಲಿಂದ ನಾನು ಇಲ್ಲಿಗೆ ಬಂದೆ. ಪೊಲೀಸ್ ಅಧಿಕಾರಿಗಳ ಜೊತೆ ಮತ್ತು ಅಸೋಸಿಯೇಷನ್ ಅಧ್ಯಕ್ಷರ ಅವರ ಜೊತೆ ನಾನು ಮಾತನಾಡಿದ್ದೇನೆ. ಈ ಅಪಾರ್ಟ್‍ಮೆಂಟ್‍ನಲ್ಲಿದ್ದ ಜನರನ್ನು ಜಾನಮಿ ಅಪಾರ್ಟ್‍ಮೆಂಟ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಅಲ್ಲಿ ಅವರೆಲ್ಲರೂ ಸುರಕ್ಷವಾಗಿದ್ದಾರೆ. ನಾಳೆ ಇಲ್ಲಿ ಎಲೆಕ್ಟ್ರಿಕ್ ಸಮಸ್ಯೆ ಸರಿ ಹೋಗುವವರೆಗೂ ಯಾರನ್ನು ಇಲ್ಲಿಗೆ ಬಿಡುತ್ತಿಲ್ಲ. ಎಲ್ಲ ರೂಂ ಗಳನ್ನು ಲಾಕ್ ಮಾಡಲಾಗಿದೆ. ಅಲ್ಲಿ ಸಿಲಿಂಡರ್ ನನ್ನು ಆಫ್ ಮಾಡಿಸಿ, ಪರಿಶೀಲಿಸಲಾಗಿದೆ. ಪೊಲೀಸರು ಕಾವಲಿದ್ದು, ಯಾರನ್ನು ಅಲ್ಲಿಗೆ ಬಿಡುತ್ತಿಲ್ಲ. ಎಲ್ಲ ರೀತಿಯ ಜಾಗರುಕತೆಯನ್ನು ನಾವು ವಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಥಿಯೇಟರ್‍ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ
6 ನಿಮಿಷಕ್ಕೆ ಬಂದ ಅಗ್ನಿಶಾಮಕ ದಳ!
ಬಿಬಿಎಂಪಿಯ ಜಂಟಿ ಆಯುಕ್ತರು ಕೂಡ ಸ್ಥಳದಲ್ಲಿ ಇದ್ದಾರೆ. ಡಿಸಿಪಿ ಅವರು ಕೂಡ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದವರು ಕರೆ ಬಂದ 6 ನಿಮಿಷದ ಬಳಗೆ ಇಲ್ಲಿ ಬಂದು ಅಗ್ನಿ ತಡೆಯಲು ಶ್ರಮಿಸಿದ್ದಾರೆ. ಆದರೆ ಅಪಾರ್ಟ್‍ಮೆಂಟ್‍ನಲ್ಲಿ ಗ್ರೀಲ್ ಹಾಕಿದ್ದರಿಂದ ಆ ಮಹಿಳೆ ಹೊರಗಡೆ ಬರಲು ಆಗಲಿಲ್ಲ. ಇನ್ನೊಬ್ಬರಿಗೆ 82 ವರ್ಷ ವಯಸ್ಸಗಿದ್ದರಿಂದ ಅವರು ಆಚೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಇದು ತುಂಬಾ ದೊಡ್ಡ ದುರಂತ. ಮನಸ್ಸಿಗೆ ನೋವು ತರುವಂತಹದ್ದು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಲ್ಲ ಇದ್ದರೂ ಈ ದೊಡ್ಡ ಅಪಘಾತದಿಂದ ಯಾರು ಒಳಗೆ ಹೋಗದ ಸ್ಥಿತಿ ಎದುರಾಗಿತ್ತು. ಈ ಘಟನೆ ಪೂರ್ತಿ ತನಿಖೆಯನ್ನು ಡಿಸಿಪಿ, ಎಸಿಪಿ ಅವರು ಮಾಡುತ್ತಿದ್ದಾರೆ. ತನಿಖೆ ನಂತರ ಇದು ಹೇಗೆ ಸಂಭವಿಸಿದೆ ಎಂದು ಹೇಳಬಹುದು. ಈಗ ನಾವು ಅವರಿಗೆ ಸಾಂತ್ವನ ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ.