ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

Public TV
1 Min Read
Sanyam Lodha

ಜೈಪುರ: ನಾನು ಗಾಂಧಿ-ನೆಹರೂ ಕುಟುಂಬದ ಗುಲಾಮ ಎಂದು ಕಾಂಗ್ರೆಸ್ ಶಾಸಕ ಸಂಯಮ್ ಲೋಧಾ ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ರಾಜಸ್ಥಾನದ ಸಿರೋಹಿ ಶಾಸಕ ಸಂಯಮ್ ಲೋಧಾ, ರಾಜಸ್ಥಾನ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವದ ವೇಳೆ ಮಾತನಾಡಿದ್ದಾರೆ. ನಾನು ನೆಹರು, ಗಾಂಧಿ ಕುಟುಂಬದ ಗುಲಾಮ. ಕೊನೇ ಉಸಿರು ಇರುವ ತನಕವೂ ನಾವು ನೆಹರು ಹಾಗೂ ಗಾಂಧಿ ಕುಟುಂಬದ ಗುಲಾಮರಾಗಿಯೇ ಉಳಿಯುತ್ತೇವೆ. ಈ ದೇಶವೂ ರೂಪು ಗೊಂಡಿರುವುದೇ ನೆಹರು ಮತ್ತು ಗಾಂಧಿ ಕುಟುಂಬದಿಂದಾಗಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಈ ಹೇಳಿಕೆ ಬಿಜೆಪಿ ಶಾಸಕರಿಂದ ಭಾರೀ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಪ್ರತಿಕ್ರಿಯಿಸಿ, ಇದೊಂದು ಹೊಸ ಸಂಸ್ಕೃತಿ ಹುಟ್ಟಿಕೊಂಡಿದೆ. ಗುಲಾಮಗಿರಿಗೆ ಅಭಿನಂದನೆಗಳು. ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ? ಎಂದು ಧ್ವನಿ ಎತ್ತುವ ಮೂಲಕವಾಗಿ ಸಭಾತ್ಯಾಗ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ಭಾರತ ಜಗತ್ತಿಗೆ ಮಾದರಿ- ಜಾಗತಿಕ ನಾಯಕರು

BJP FLAG

ಈ ಲೋಧಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಆಗಿದ್ದಾರೆ. ಹರಿದೇವ್ ಜೋಶ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಿದ್ದುಪಡಿ ಮಸೂದೆ ಸಂಬಂಧ ಮಾತನಾಡುವಾಗ ಹೀಗೆ ಹೇಳಿದ್ದಾರೆ.

ಮಾರ್ಚ್ 15 ರಂದು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಮಾರ್ಷಲ್‍ಗಳ ಸಹಾಯದಿಂದ ಲೋಧಾ ಅವರನ್ನು ರಾಜಸ್ಥಾನ ವಿಧಾನಸಭೆಯಿಂದ ಹೊರಹಾಕಲಾಗಿತ್ತು. ಇದೀಗ ಈ ಹೇಳಿಕೆಯಿಂದ ಮತ್ತೆ  ಸುದ್ದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *