ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಕೆಲಸದ ಬಗ್ಗೆ 4 ಒಳ್ಳೆಯ ಮಾತುಗಳನ್ನು ಆಡಿದ್ದೇನೆ ವಿನಾಃ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅಥವಾ ಎಚ್ ಡಿ ಕುಮಾರಸ್ವಾಮಿ ಅಥವಾ ಜೆಡಿಎಸ್ ಬಗ್ಗೆ ಒಂದೇ ಒಂದು ಪದ ಮಾತಾಡಿಲ್ಲ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯ ಶಕ್ತಿ ಇಲ್ಲದವರಿಗೆ ಸಿದ್ದರಾಮಯ್ಯನವರು ಶಕ್ತಿ ಕೊಟ್ಟಿದ್ದಾರೆ. 4 ಒಳ್ಳೆ ಮಾತನಾಡಲು ಆಗೋದಿಲ್ಲ ಎಂದರೆ ಏನ್ರೀ ನಾವೇನೂ ಮಾತಾನಾಡುವುದೇ ಬೇಡವಾ ಎಂದು ಪ್ರಶ್ನಿಸಿದ ಅವರು, ಅವರ ಪಾರ್ಟಿಯವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ರು.
Advertisement
Advertisement
ಜೆಡಿಎಸ್ ಬಗ್ಗೆ ಅಥವಾ ಎಚ್‍ಡಿ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಅಪ್ಪಿತಪ್ಪಿನೂ ಮಾತಾನಾಡಿಲ್ಲ. ಅವರ ಹೆಸರನ್ನು ಹೇಳಲಿಲ್ಲ. ಸಮ್ಮಿಶ್ರ ಸರ್ಕಾರ ಗೆದ್ದಿದೆ ಅಂತಾನೂ ಮಾತಾಡಿಲ್ಲ. 4-5 ವರ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ರು. ಅವರ ಬಗ್ಗೆ 4 ಒಳ್ಳೆಯ ಮಾತನಾಡಿದೆ ಅಷ್ಟೇ. ಅದು ಬಿಟ್ಟು ಸಮ್ಮಿಶ್ರ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಜಡ್ಜ್ ಮಾಡಿಲ್ಲ ಅಂದ್ರು. ಇದನ್ನೂ ಓದಿ: ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್
Advertisement
ಯಾವ ಕಿರುಕುಳನೂ ಇಲ್ಲ. ಅವರ ಪಕ್ಷದ ವಿಚಾರವನ್ನು ನಾನು ಅಪ್ಪಿತಪ್ಪಿನೂ ಮಾತಾಡಿಲ್ಲ. ನಮ್ಮ ಪಕ್ಷದ ಮುಖಂಡರ ಬಗ್ಗೆ ನಾನು ಮಾತಾನಾಡಿರ್ತಿನಿ. ನಾವು ಯಾವತ್ತೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನಾಗಿ ಬೆಳೆದಿಲ್ಲ. ಬೇಕಿದ್ರೆ ಅವರ ಪಕ್ಷದವರು ನಾನು ಮಾತಾಡಿರುವ ಭಾಷಣದ ಕ್ಲಿಪ್ ತರಿಸಿಕೊಂಡು ನೋಡಲಿ ಎಂದು ಸಿಡಿಮಿಡಿಗೊಂಡರು.
Advertisement
ಬಸವರಾಜ ಹೊರಟ್ಟಿಯವರು 7 ಬಾರಿ ಎಂಎಲ್‍ಸಿ ಆಗಿದ್ದಾರೆ. ಅವರು ಪದೇ ಪದೇ ನನ್ನ ಭಾಷಣದ ಕ್ಲಿಪ್ ಹಾಕಿಕೊಂಡು ನೋಡಲಿ. ಕುಂಬಳಕಾಯಿ ಕಳ್ಳ ಅಂದ್ರೆ ಹೊರಟ್ಟಿಯವರು ಯಾಕೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮುಖಂಡರ ಬಗ್ಗೆ ಹಾಗೂ ಕುಮಾರಸ್ವಾಮಿ ಬಗ್ಗೆ ಎಲ್ಲೂ ಕೂಡ ಒಂದೇ ಒಂದು ಪದ ಮಾತಾಡಿಲ್ಲ. ಬೇರೆ ಪಕ್ಷದ ಬಗ್ಗೆ ಟೀಕೆ ಮಾಡಲು ನಾನು ಇದೂವರೆಗೂ ಹೋಗಿಲ್ಲ. ಹೋಗೋದು ಇಲ್ಲ ಎಂದು ಸ್ಪಷ್ಟಪಡಿಸಿದ್ರು.
ಯಾವುದಾದ್ರೂ ಮಂತ್ರಿ ಕೇಳಿದ್ರೆ, ಆಯ್ತು ನಮ್ಮಲ್ಲೇ ಮುಖಂಡರುಗಳು ಮಕ್ಕಳು ಕೇಳುತ್ತಾರೆ ಅನ್ನೋ ಭಾವನೆಯಲ್ಲಿ ನಾನು ಹೇಳಿದ್ದೆ ವಿನಹ ದೇವೇಗೌಡ ಫ್ಯಾಮಿಲಿ ಬಗ್ಗೆ ನಾನು ಇದೂವರೆಗೂ ಮಾತಾಡಿಲ್ಲ. ಕಾಂಗ್ರೆಸ್ ನವರೂ ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡಿಕೊಳ್ಳಲಿ. ನನಗೆ ಒಂದು ಲಿಮಿಟ್ ಇರುತ್ತದೆ. ಆ ಗೆರೆ ದಾಟಿ ನಾನು ಹೋಗುವುದಿಲ್ಲ ಎಂದರು.
https://www.youtube.com/watch?v=i9skRR-k5h8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv