ದಾವಣಗೆರೆ: ಸ್ಥಳೀಯ ಸಂಸ್ಥೆ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಗಳ ಪ್ರಚಾರದ ಭರಾಟೆಯು ಜೋರಾಗಿದ್ದು, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಖುದ್ದು ಆಟೋ ಓಡಿಸುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ರಂಗೇರಿದ್ದು, ಶಾಸಕ ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಭಿನ್ನವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಖುದ್ದು ಆಟೋ ಓಡಿಸುತ್ತಾ ಹೊನ್ನಾಳಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಮಾಡುತ್ತಿರುವ ಅವರು, ಆಟೋದಲ್ಲಿ ಆಯಾ ವಾರ್ಡಿನ ಅಭ್ಯರ್ಥಿಗಳನ್ನು ಕೂರಿಸಿಕೊಂಡು ಏರಿಯಾಗಳ ತುಂಬೆಲ್ಲಾ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿ ಹೊನ್ನಾಳಿ ಪಟ್ಟಣ ಪಂಚಾಯಿತಿ ಗದ್ದುಗೆಯನ್ನ ಬಿಜೆಪಿಯೇ ಹಿಡಿಯಲೇಬೇಕೆಂದು ಹೊಣೆ ಹೊತ್ತಿರುವ ಅವರು ಪ್ರತಿ ದಿನ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv