ಬೆಂಗಳೂರು: ಉತ್ತರಪ್ರದೇಶ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿಶ್ಚಿತ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಸರ್ಕಾರದಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ ಉಳಿದೆಲ್ಲರ ಬದಲಾವಣೆ ಆಗಲಿದೆ. ಯತ್ನಾಳ್ ಹೇಳಿರೋದು ಸತ್ಯ. ಅಭಿವೃದ್ಧಿ ದೃಷ್ಟಿಯಿಂದ ಒಂದಷ್ಟು ಬದಲಾವಣೆ ಆಗಲಿದೆ. ನೋಡಿದ ಮುಖಗಳನ್ನೇ ಜನ ಎಷ್ಟು ಬಾರಿ ನೋಡ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಿರಿಯ ಸಚಿವರ ಮೇಲೆ ಆಕ್ರೋಶ ಹೊರಹಾಕಿದರು. ನಾನು ಸಾಮಾನ್ಯರಲ್ಲಿ, ಸಾಮಾನ್ಯ ಕಾರ್ಯಕರ್ತ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.
Advertisement
Advertisement
ನನಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನಗಣ್ಯ. ಇದು ಹೋದ ಪುಟ್ಚ ಬಂದ ಪುಟ್ಚ ಅನ್ನೋ ರೀತಿ. ನನ್ನ ಕ್ಷೇತ್ರನೇ ನನಗೆ ಸರ್ವಸ್ವ. ಈ ಹುದ್ದೆ ಕೇವಲ ತೋರ್ಪಡಿಕೆ ಅಷ್ಟೇ ಇದರಲ್ಲಿ ಏನೂ ಇಲ್ಲ, ಕೇವಲ ಕಚೇರಿ ವಾಹನ ಅಷ್ಚೇ. ಬಿಡು ಅಂದ್ರೆ ಈಗಲೇ ಬಿಡ್ತೇನೆ ಎಂದರು. ಇದನ್ನೂ ಓದಿ: ಫ್ಲೆಕ್ಸ್, ಹೋರ್ಡಿಂಗ್ ಎಲ್ಲಾ ಹಾಕಿದ್ದೇನೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ – ಬಿಕ್ಕಿಬಿಕ್ಕಿ ಅತ್ತ ಆಕಾಂಕ್ಷಿ
Advertisement
Advertisement
ಅನಗತ್ಯ ಪಾದಯಾತ್ರೆ ಮಾಡಿ ಗೊಂದಲ ಮೂಡಿಸಿದ ಕಾಂಗ್ರೆಸ್ , ರಾಜ್ಯದ ಜನತೆಯ ಬಹಿರಂಗ ಕ್ಷಮೆ ಕೇಳಬೇಕು. ನನ್ನಿಂದ ತಪ್ಪಾದಾಗ ಕ್ಷಮೆ ಕೇಳಿದ್ದೆ ನೀವೂ ಕೇಳಿ. ಪದೇ ಪದೇ ನನ್ನ ಮೇಲೆ ಕ್ರಮಕ್ಕೆ ಒತ್ತಾಯಿಸುವ ಕಾಂಗ್ರೆಸ್ ಗೆ ಸವಾಲೆಸೆದರು. ನನ್ನ ಮೇಲೆನೂ ಕೇಸ್ ಹಾಕಿ ಅಂತ ಎಸ್ ಪಿ ಗೆ ಹೇಳಿದ್ದೆ. ನನ್ನ ಮೇಲೆ ಕೇಸ್ ಹಾಕಿದ್ರೆ ನಾನು ಸ್ವಾಗತಿಸ್ತೀನಿ ಎಂದು ಹೇಳಿದರು.