– ಅದ್ಹೇಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ 2 ದಿನಕ್ಕೆ ಆಚೆ ಬರ್ತಾರೆ?
ಮಂಡ್ಯ: ಮಾಜಿ ಸಿಎಂ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್ ಶಾಸಕ ರಮೇಶ್ ಬಂಡೀಸಿದ್ದೇಗೌಡ (Ramesh Bandisiddegowda) ಅನುಮಾನ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿಯ ಕಾಂಗ್ರೆಸ್ ಸಭೆಯಲ್ಲಿ ಹೆಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಅವರು, ಚುನಾವಣೆ ಬಂತು ಎಂದರೇ ಸಾಕು ಆಸ್ಪತ್ರೆ ಸೇರ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತೆ. ನಾಲ್ಕನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ. ಅದು ಹೇಗೆ ಸಾಧ್ಯ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕೆ.ವಿ ಗೌತಮ್‌ಗೆ ಕೋಲಾರ ಕಾಂಗ್ರೆಸ್ ಟಿಕೆಟ್
ಚಲುವರಾಯಸ್ವಾಮಿಗೆ ಇರುವ ಸೇಮ್ ಕಾಯಿಲೆ ಅವರ ಸ್ನೇಹಿತ ಕುಮಾರಸ್ವಾಮಿಯವರಿಗೆ ಇದೆ. ಚಲುವರಾಯಸ್ವಾಮಿ ಆಸ್ಪತ್ರೆ ಸೇರಿದ್ರೆ ಒಂದು ತಿಂಗಳು ಈಚೆಗೆ ಬರಲ್ಲ. ಅದು ಹೇಗೆ ಹಾರ್ಟ್ ಆಪರೇಷನ್ ಮಾಡಿಸಿ 2 ದಿನಕ್ಕೆ ಆಚೆ ಬರ್ತಾರೆ ಎಂದು ಕೇಳಿದರು.
ಈ ಚುನಾವಣೆ ಅಭಿವೃದ್ದಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೆ ಕೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿ. ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಅಪ್ಪನ ಗೆಲುವಿಗೆ ಮಗನ ಪಣ