DistrictsKarnatakaLatestMain PostYadgir

ಶಾಸಕ ರಾಜು ಗೌಡಗೆ ಮಾತೃ ವಿಯೋಗ

ಯಾದಗಿರಿ: ಸುರಪುರ ಬಿಜೆಪಿ ಶಾಸಕ, ಮಾಜಿ ಸಚಿವ ರಾಜುಗೌಡ ಅವರ ತಾಯಿ ನಿಧನರಾಗಿದ್ದಾರೆ.

ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ತಿಮ್ಮಮ್ಮ ಶಂಬನಗೌಡ ನಾಯಕ್ ಕೊನೆಯುಸಿರೆಳೆದಿದ್ದಾರೆ. ಪಾಶ್ರ್ವವಾಯುಗೆ ತುತ್ತಾಗಿದ್ದ ತಿಮ್ಮಮ್ಮ ನಾಯಕ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ತಿಮ್ಮಮ್ಮ ಬಿದ್ದು ಗಾಯಗೊಂಡಿದ್ದರು. ಅಲ್ಲದೆ ತಿಮ್ಮಮ್ಮ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಒಟ್ಟಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಿಮ್ಮಮ್ಮ ಕೊನೆಯುಸಿರೆಳೆದಿದ್ದಾರೆ.

ತಿಮ್ಮಮ್ಮ ಪಾರ್ಥಿವ ಶರೀರವನ್ನು ಸುರಪುರಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದ್ದು, ಸ್ವಗ್ರಾಮ ಕೊಡೆಕಲ್ ನಲ್ಲಿ ನಾಳೆ(ಮಂಗಳವಾರ) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವುದಾಗಿ ಕುಟುಂಬ ಮೂಲಗಳ ಮಾಹಿತಿ ನೀಡಿವೆ.

Leave a Reply

Your email address will not be published.

Back to top button