– ಗೋಣಿ ಚೀಲ ಹೇಳಿಕೆಗೆ ಶಾಸಕ ತಿರುಗೇಟು
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.
ಹಾನಗಲ್ ನ ಗಡಿಯಂಕನಹಳ್ಳಿ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಹುಚ್ಚಾಸ್ಪತ್ರೆಗೆ ಭೇಟಿ ನೀಡ್ತೀವಿ ಅಂತ ಹೇಳಿದ್ದಾರೆ. ಅವರು ಭೇಟಿ ನೀಡಿದರೆ ಖಂಡಿತ ನಾವು ಹಣ್ಣು-ಹಂಪಲು ತಗೊಂಡು ನಾವು ಆರೋಗ್ಯ ವಿಚಾರಿಸಿ ಬರುತ್ತೇವೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಕೊರೊನಾಗೆ ಹೇಗೆ ಫ್ರೀ ಟ್ರೀಟ್ಮೆಂಟ್ ಕೊಟ್ಟಿದ್ರೋ ಅದೇ ರೀತಿ ಹುಚ್ಚಾಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವಂತೆ ಸಿಎಂಗೆ ಮನವರಿಕೆ, ಮನವಿ ಮಾಡುತ್ತೇವೆ. ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆ ಸೋತಿದ್ದಾರೆ. ಸೋತ ಮೇಲೆ ಪಾಪ ಎಲ್ಲಿಗೆ ಹೋಗಬೇಕು ಅವರು?, ಅವರು ಹುಚ್ಚಾಸ್ಪತ್ರೆಗೇ ಹೋಗಬೇಕು ಎಂದು ರಾಜುಗೌಡ ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ
Advertisement
Advertisement
ಇದೇ ವೇಳೆ ಡಿಕೆಶಿ ಗೋಣಿ ಚೀಲದ ಹೇಳಿಕೆಗೆ ತಿರುಗೇಟು ನಿಡಿದ ಶಾಸಕರು, ಡಿಕೆ ಶಿವಕುಮಾರ್ ಅವರು ಏನು ಕೆಲಸ ಮಾಡಿದ್ದಾರೋ ಅದನ್ನ ನೆನಸಿಕೊಂಡು ಮಾತನಾಡುತ್ತಾರೆ. ಅವರು ಸಚಿವರಿದ್ದ ಸಮಯದಲ್ಲಿ ಗೋಣಿ ಚೀಲದಲ್ಲಿ ದುಡ್ಡು ತಗೊಂಡು ಹೋಗಿ ಎಲೆಕ್ಷನ್ ಮಾಡಿದ್ದಾರೆ ಪಾಪ. ಅವರು ಏನ್ ಮಾಡಿದ್ದಾರೋ ಅದನ್ನೇ ಹೇಳಬೇಕಾಗುತ್ತೆ, ಅದನ್ನ ಬಿಟ್ಟು ಬೇರೆ ಹೇಳೋಕೆ ಬರಲ್ಲ. ಅವರು ಯಾವತ್ತಾದ್ರೂ ಬೂತ್ ಕಮಿಟಿ ಸಭೆ ಮಾಡಿದ್ದಾರಾ..? ಎಲ್ಲ ಸಮುದಾಯದವರನ್ನ ಕರೆದು ಮಾತನಾಡಿದ್ದಾರಾ..? ಪಾಪ ಅವರು ಏನು ಕೆಲಸ ಮಾಡಿದ್ದಾರೆ ಅದನ್ನು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ದ್ರೋಹ ಮಾಡಿರುವ ಸುಧಾಕರ್ ಅಧಿಕಾರದ ಮದದಿಂದ ವರ್ತಿಸ್ತಿದ್ದಾರೆ: ಸಿದ್ದರಾಮಯ್ಯ