ಮಂಗಳೂರು: ಸರ್ಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಮೋರ್ಚಾ ಮಹತ್ವದ ಪಾತ್ರವಹಿಸಬೇಕು. ಎಸ್.ಟಿ ಸಮುದಾಯದ ಶೇ.80ರಷ್ಟು ಜನರು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹರ್ಷ ವ್ಯಕ್ತಪಡಿಸಿದರು.
ಸ್ಪರ್ಶ ಕಲಾಮಂದಿರದಲ್ಲಿ ಕ್ಷೇತ್ರ ಎಸ್.ಟಿ.ಮೋರ್ಚಾದ ಅಧ್ಯಕ್ಷ ರಾಮ ನಾಯ್ಕ್ ಕುಕ್ಕಿನಾರುರವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಬಂಟ್ವಾಳ ಮಂಡಲ ಎಸ್.ಟಿ.ಮೋರ್ಚಾದ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದರು. ಸರ್ಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಮೋರ್ಚಾ ಮಹತ್ವದ ಪಾತ್ರವಹಿಸಬೇಕು ಎಂದು ಕಿವಿಮಾತು ಹೇಳಿದರು.
Advertisement
Advertisement
ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮಂಡಲ ಕಾರ್ಯದರ್ಶಿ ಹಾಗೂ ಎಸ್.ಟಿ.ಮೋರ್ಚಾದ ಪ್ರಭಾರಿ ರಮನಾಥ ರಾಯಿ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಚೆನ್ನಕೇಶವ ಅರಸಮಜಲ್, ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಹಾಗೂ ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಬಂಟ್ವಾಳ ಮಂಡಲ ಉಪಾಧ್ಯಕ್ಷರೂ ಆದ ಜಯರಾಮ್ ನಾಯ್ಕ್ ಕುಂಟ್ರಕಲ, ಬಂಟ್ವಾಳ ಮಂಡಲ ಕೋಶಾಧಿಕಾರಿ ಪ್ರಕಾಶ್ ಅಂಚನ್, ಮಂಡಲ ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಮಂಡಲ ಎಸ್.ಟಿ.ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಯಶವಂತ ನಾಯ್ಕ್ ನಗ್ರಿ, ಪಕ್ಷದ ಪ್ರಮುಖರಾದ ಯಶೋಧರ ಕರ್ಬೆಟ್ಟು, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಿತಾ ಪುರುಷೋತ್ತಮ ನಾಯ್ಕ್ ಮತ್ತು ಎಸ್.ಟಿ. ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಎಸ್.ಟಿ.ಸಮುದಾಯದ ಗ್ರಾಮ ಪಂಚಾಯತ್ ಸದಸ್ಯರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ ಮಂಕುಡೆಕೋಡಿ, ಸ್ವಾಗತಿಸಿದರು. ಜಿಲ್ಲಾ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಯನ್. ಎರ್ಮೆನಾಡ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ವಿಠಲ ನಾಯ್ಕ್ ಬಾಳ್ತಿಲ ಧನ್ಯವಾದಗೈದರು.
ವಿಶೇಷ ಕಾರ್ಯಕಾರಿಣಿಯ ಎರಡನೆಯ ಅವಧಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಜಿಲ್ಲಾ ಎಸ್. ಟಿ. ಮೋರ್ಚಾ ಪ್ರಭಾರಿಗಳೂ ಆದ ಜಯಶ್ರೀ ಕರ್ಕೇರ ಮತ್ತು ಸಮಾರೋಪದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ್ ಇವರು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು.