ಹಾಸನ: ಯಾವುದೇ ಬೌಲಿಂಗ್ (Bowling) ಬಂದರೂ ಉತ್ತಮ ಸ್ಕೋರ್ (Score) ಕೊಡುವ ಪ್ರಯತ್ನ ಮಾಡುತ್ತೇನೆ. ರಾಜ್ಯದ ಜನ ತಿರುಗಿ ನೋಡುವಂತೆ ಫಲಿತಾಂಶ ಕೊಡಲು ಜನ ತಯಾರಾಗಿದ್ದಾರೆ ಎಂದು ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಜೆಡಿಎಸ್ (JDS) ಗೆಲ್ಲುತ್ತದೆ ಎಂಬ ಹೆಚ್.ಡಿ.ರೇವಣ್ಣನವರ (H.D.Revanna) ಹೇಳಿಕೆಗೆ ಶಾಸಕ ಪ್ರೀತಂ ಗೌಡ (Preetham Gowda) ಟಾಂಗ್ (Tong) ನೀಡಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಏಳಕ್ಕೆ ಏಳು ಕ್ಷೇತ್ರ ಗೆಲ್ಲಲೇಬೇಕು. ಆದರೆ ಜೆಡಿಎಸ್ ಎಷ್ಟು? ಬಿಜೆಪಿ (BJP) ಎಷ್ಟು? ಕಾಂಗ್ರೆಸ್ (Congress) ಎಷ್ಟು ಎಂದು ಫಲಿತಾಂಶದ ದಿನ ಗೊತ್ತಾಗುತ್ತದೆ. ವಿಪಕ್ಷಗಳು ಹಾಸನ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಲಿಲ್ಲ. ನಮ್ಮ ಟಿಕೆಟ್ ಕೂಡ ರಾಷ್ಟ್ರೀಯ ನಾಯಕರು ಇನ್ನೂ ಘೋಷಣೆ ಮಾಡಿಲ್ಲ. ಎಲ್ಲದಕ್ಕೂ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್ ಸಲ್ಲಿಕೆ
Advertisement
Advertisement
ಅಖಾಡದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ನಿರ್ಧಾರವಾದ ಮೇಲೆ ಕಾವೇರುತ್ತದೆ. ನಂತರ ಸ್ಪೀಡ್ ಬೌಲರ್‌ಗೆ ಯಾವರೀತಿಯಾಗಿ ಫುಟ್ ಹಾಕಬೇಕು. ಸ್ಪಿನ್, ಮೀಡಿಯಂ ಪೇಸರ್ ಆದರೆ ಹೇಗೆ ಆಡಬೇಕು ಎಂದು ವರ್ಕೌಟ್ ಮಾಡಿದ್ದೇನೆ. ಯಾವ ಬೌಲರ್ ಬರುತ್ತಾರೆ ಎಂದು ನೋಡಿ, ಪವರ್ ಪ್ಲೇ ಹೇಗೆ ಆಡಬೇಕು, ಸ್ಲ್ಯಾಗ್ ಓವರ್ ಹೇಗೆ ಆಡಬೇಕು, ಮಧ್ಯದಲ್ಲಿ ಹೇಗೆ ಆಡಬೇಕು ಎಂದು ನೋಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ
Advertisement
ರೇವಣ್ಣ ಸ್ಪರ್ಧೆ ಮಾಡಿದರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನದೇನಿಲ್ಲ. ಜನರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧ. ಆಗ ನಾನು ಶಾಸಕನಾಗಿ ಅಭಿವೃದ್ಧಿ ವಿಚಾರ ಬಂದಾಗ ಮಾತನಾಡುತ್ತಿದ್ದೆ. ಆದರೆ ಈಗ ಅಭ್ಯರ್ಥಿಯಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಎಷ್ಟು ಸಾವಿರದಲ್ಲಿ ಗೆಲ್ಲಿಸುತ್ತಾರೆ ಎಂದು ಜನರು ತೀರ್ಮಾನ ಮಾಡುತ್ತಾರೆ. ನಾನು ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಆಗುತ್ತದೆ. ಈ ಕುರಿತು ಚುನಾವಣೆ (Election) ಸಮಯದಲ್ಲಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ: ಸಿದ್ದು ಪತ್ನಿ ಹೇಳಿದ್ದೇನು? ಪುತ್ರ ಹೇಳಿದ್ದೇನು?
Advertisement
ಅಭಿವೃದ್ಧಿ ಕಾಮಗಾರಿಗೆ ತೊಡಕು ಮಾಡಿದ್ದರಿಂದ ಆ ಉತ್ತರ ಕೊಟ್ಟಿದ್ದೆ. ನಾನು ಅಂದು ಕೊಟ್ಟಿದ್ದ ಹೇಳಿಕೆಯನ್ನು ಜನರು ಗಮನಿಸಿದ್ದಾರೆ. ಪ್ರೀತಂಗೌಡ ಸರಿಯಾಗಿ ಹೇಳಿದ್ದಾನೆ ಎಂದರೆ ಜನ ಸಾಮಾನ್ಯರೇ ಅದನ್ನು ಮಾಡುತ್ತಾರೆ. ನನ್ನದು ಯೂಟರ್ನ್ ಇಲ್ಲವೇ ಇಲ್ಲ. ನೇರವಾಗಿ ಹೋಗುವುದೇ ನನ್ನ ಕೆಲಸ. ನೇರವಾಗಿ ಹೋಗುವಾಗ ಹಂಪ್ಸ್ ಬಂದರೆ ಸ್ಲೋ ಮಾಡಬೇಕು. ಟ್ರಾಫಿಕ್ ಸಿಗ್ನಲ್ ಬಂದಾಗ 30 ಸೆಕೆಂಡ್ ನಿಂತು ಮುಂದೆ ಹೊರಡಬೇಕು. ಗುರಿ ನಿಚ್ಚಳವಾಗಿದೆ. ಗುರು ಮೋದಿಯವರ (Narendra Modi) ಮಾರ್ಗದರ್ಶನ ಕೂಡ ಸರಿಯಾಗಿದೆ. ಹಾಗಾಗಿ ಯೂಟರ್ನ್ ಇಲ್ಲಾ. ಲೆಫ್ಟ್, ರೈಟ್ ಇಲ್ಲ. ನೇರ ಹೋಗೋದೆ ಎಂದು ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್
ರೇವಣ್ಣ ತಮ್ಮ ವಿರುದ್ದ ಸ್ಪರ್ಧೆ ಮಾಡಿದರೆ 49,999 ಮತಗಳ ಅಂತರದಲ್ಲಿ ಗೆದ್ದು ಐವತ್ತು ಸಾವಿರಕ್ಕೆ ಒಂದೇ ಮತ ಕಡಿಮೆಯಾದರೂ ರಾಜಿನಾಮೆ ನೀಡುವ ಸವಾಲು ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಈ ಸವಾಲಿಗೆ ಕಂಡಿಷನ್ ಅಪ್ಲೈ ಇದೆ. ಯಾರು ಅಭ್ಯರ್ಥಿ ಆಗುತ್ತಾರೆ ಬರಲಿ. ಫೀಲ್ಡ್ ರೆಡಿಯಾಗಲಿ. ನಾವು ಯಾರು ಬಂದರೂ ಗೆಲ್ಲತ್ತೇನೆ, ಯಾರು ಬಂದರೂ ಐವತ್ತು ಸಾವಿರ ಲೀಡ್ ಎಂದು ನಾನು ಮಾತೇ ಆಡಲಿಲ್ಲ. ನನಗೆ ನೀವು ಸಮಸ್ಯೆ ಮಾಡುತ್ತಿದ್ದೀರಿ. ಇದನ್ನು ಜನರ ಮುಂದೆ ಹೇಳುತ್ತೇನೆ ಅಂತಾ ಹೇಳಿದ್ದೆ. ನೀವು ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ. ಫುಡ್ ಕೋರ್ಟ್, ಆಟೋ ಸ್ಟ್ಯಾಂಡ್ ಮಾಡಲು ಬಿಡುತ್ತಿಲ್ಲ. ರಸ್ತೆ- ಪಾರ್ಕ್ ಮಾಡಲು ಬಿಡುತ್ತಿಲ್ಲ. ಇವೆಲ್ಲಾ ತೊಂದರೆ ಕೊಡುತ್ತಿರುವ ನೀವೇನಾದರೂ ಬಂದರೆ ನೀವು ಮಾಡಿರುವ ಸಮಸ್ಯೆಗಳನ್ನು ಹಾಸನದ ಜನರ ಮುಂದೆ ಹೇಳುತ್ತೇನೆ ಎಂದಿದ್ದೆ. ಅವರು ನಿಮ್ಮನ್ನು ಐವತ್ತು ಸಾವಿರ ಹಿನ್ನಡೆ ಮಾಡುತ್ತಾರೆ ಎಂದು ಹೇಳಿದ್ದೆ. ಅದಕ್ಕೆ ಈಗಲು ಬದ್ಧನಾಗಿದ್ದೇನೆ. ಅವರು ಬಂದು ನಿಂತ ಮೇಲೆ ನಾನು ಕಮೆಂಟ್ ಮಾಡುತ್ತೇನೆ. ಅಂತೆ ಕಂತೆಗಳಿಗೆ ಉತ್ತರ ಕೊಡುವುದಿಲ್ಲ ಎಂದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ