ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹ ಸಮಸ್ಯೆ ಎದುರಾಗಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಇಂದು ಸಂಸದ ಪ್ರತಾಪ್‌ಸಿಂಹ ದಶಪಥ ಕಾಮಗಾರಿಯ ಪರಿಶೀಲಿಸಿದ್ದಾರೆ.
Advertisement
ಬಳಿಕ ಮಾತನಾಡಿರುವ ಅವರು, ರಾಮನಗರದಲ್ಲಿ ನಾಲೆಗಳು ಒತ್ತುವರಿ ಆಗಿದ್ದರಿಂದ ನೀರು ಜಾಸ್ತಿ ಹರಿದು ರಸ್ತೆಯಲ್ಲಿ ನಿಂತಿದೆ. ಅದಕ್ಕೆ ನಾನು ಜನರ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದರೆ ದಂಡ
Advertisement
ಮೊದ್ಲು ಮಾಜಿ ಸಿಎಂ ಸಿದ್ದರಾಮಯ್ಯ ಬೈತಾ ಇದ್ರು.. ಈಗ ಕುಮಾರಣ್ಣ ಬೈತಾ ಇದಾರೆ. ನಾನು ಕಾರ್ಮಿಕ, ಯಾರ್ಯಾರು ಈ ರಾಜ್ಯದ, ಕ್ಷೇತ್ರದ ಮಾಲೀಕರು ಅಂತ ಅಂದುಕೊಳ್ಳ್ತಾರೆ , ಅವರಿಗೆ ಕೆಲಸದವರನ್ನ, ಕಾರ್ಮಿಕರನ್ನ ಬೈಯುವ ಹಕ್ಕಿದೆ. ನನಗೇನು ಬೇಸರವಿಲ್ಲ! pic.twitter.com/L9kWmM3aOu
— Pratap Simha (@mepratap) September 1, 2022
Advertisement
ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ನನ್ನ ಬೈತಾ ಇದ್ರು. ಈಗ ಕುಮಾರಣ್ಣ ಬೈತಾ ಇದಾರೆ. ನಾನು ಒಂದು ರೀತಿ ಕೆಲಸದವನು, ನಾನೊಬ್ಬ ಕಾರ್ಮಿಕ. ಯಾರ್ಯಾರು ಈ ಕ್ಷೇತ್ರದ, ರಾಜ್ಯದ ಮಾಲೀಕರು ಅನ್ಕೊಂಡಿದಾರೊ ಅವರಿಗೆ ಕಾರ್ಮಿಕರನ್ನ ಬೈಯ್ಯುವಂತ ಹಕ್ಕಿದೆ. ಅದರಿಂದ ನನಗೇನೂ ಬೇಸರ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನುಡಿದಂತೆ ನಡೆಯುವವರು ಯೋಗಿ ಆದಿತ್ಯನಾಥ್ – ಬೊಮ್ಮಾಯಿ
Advertisement
ರಾಮದೇವರ ಬೆಟ್ಟದ ಕಡೆಯಿಂದ ಹರಿದುಬಂದ ನೀರಿನಿಂದಾಗಿ ಮುಳುಗಿದ್ದ ಸಂಗಬಸಪ್ಪನದೊಡ್ಡಿ ಸಮೀಪದ ಸ್ಥಳಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಧರ್, ಡಿಬಿಎಲ್ ಪ್ರಾಜೆಕ್ಟ್ ಮೆನೇಜರ್ ಗೋವಿಂದ್, ಸಾಜಿ ರತ್ನಾಕರ್ ಮತ್ತು NHAI ನಿಂದ ಬಂದಿರುವ "ಡ್ರೈನ್ ಎಕ್ಸ್ಪರ್ಟ್" ಗಳ ಜೊತೆ ಭೇಟಿಕೊಟ್ಟಿದ್ದೆ. pic.twitter.com/KlKkaE637u
— Pratap Simha (@mepratap) September 1, 2022
ನೀರು ನಿಂತ ಬಗ್ಗೆ ಅಧ್ಯಯನ ಮಾಡಲು ಡೆಲ್ಲಿ, ಕರ್ನಾಟಕ ತಜ್ಞರನ್ನು ಕರೆದುಕೊಂಡು ಬಂದಿದ್ದೇನೆ. ಎಲ್ಲ ಕಡೆ ಪರಿಶೀಲನೆ ನಡೆಯುತ್ತಿದೆ. ಹೊಸ ರಸ್ತೆ ಮಾಡುವಾಗ ಸಹಜವಾಗಿ ಸವಾಲು ಸೃಷ್ಟಿ ಆಗುತ್ತೆ. ಈಗ ಅದನ್ನ ಪರಿಹರಿಸಿದ್ದೇವೆ. ಮಾನ್ಯ ಕುಮಾರಣ್ಣ ಎಲ್ಲಿ ಕಳಪೆ ಆಗಿದೆ ಹೇಳಿ ನೀವೆ ಖುದ್ದಾಗಿ ಬಂದು ಒಂದು ಟೀಂ ಕರೆತಂದು ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಿ. ಎಲ್ಲಿ ಕಳಪೆ ಅವೈಜ್ಞಾನಿಕ ಹೇಳಿದರೆ ನಾವೂ ಸರಿಪಡಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.