ಚಿಕ್ಕಬಳ್ಳಾಪುರ: `ನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮದ ಮೂಲಕ ಕ್ಷೇತ್ರದ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ಕಾರ್ಯಕ್ರಮ ಮಾಡಿ ಮಾದರಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur Constituency) ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ʻwww.pradeepeshwarmla.comʼ ಎಂಬ ಹೊಸ ವೆಬ್‌ಸೈಟ್ ಆರಂಭಿಸಿದ್ದಾರೆ. ಕ್ಷೇತ್ರದ ಜನ ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ದೂರು ನೀಡಲು ನೇರವಾಗಿ ಎಂಎಲ್‍ಎ ಬಳಿ ಬರೋದು ಬೇಡ, ಜನರು ತಮ್ಮ ಸಮಸ್ಯೆ, ಹಣ ಖರ್ಚು ಮಾಡೋದು ಬೇಡ ಎಂಬ ಸದುದ್ದೇಶದಿಂದ ಈ ವೆಬ್ ಸೈಟ್ ಆರಂಭಿಸಿಲಾಗಿದೆ.
ಜನ ತಮ್ಮ ಮೊಬೈಲ್ ಮೂಲಕವೇ ತಮ್ಮ ಸಮಸ್ಯೆಗಳಿಗೆ ದೂರು ಹೇಳಿಕೊಳ್ಳಲು ವೆಬ್‌ಸೈಟ್‌ನಲ್ಲಿ (Website) ಬಲಗಡೆ ದೂರು/ಸಲಹೆಗಳು ಎಂಬ ವಿಭಾಗಗಳಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ, ಕಂಪ್ಲೇಟ್ ಬಾಕ್ಸ್ ತೆರೆಯುತ್ತದೆ. ಜನ ಅಲ್ಲಿ ತಮ್ಮ ಅಭಿಪ್ರಾಯ/ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ದೂರು ನೀಡುವ ಜನರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸ್ಪಂದಿಸಲು ನೂರು ಮಂದಿ ಸಿಬ್ಬಂದಿಯನ್ನ ನೇಮಕ ಮಾಡಿ ಕಚೇರಿ ಸಹ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಸಿಬ್ಬಂದಿ ಜನರಿಗೆ ಸ್ಪಂದಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜನ ಇನ್ಮುಂದೆ ತಮ್ಮ ಸಮಯ ವ್ಯರ್ಥ ಮಾಡದೇ ಮೊಬೈಲ್ ಮೂಲಕವೇ ತಮ್ಮ ಮನೆಯಲ್ಲಿರುವ ಮಗ-ಮಗಳು ಯಾರಿಂದಾದರೂ ವೆಬ್‌ಸೈಟ್‌ನಲ್ಲಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. ಇನ್ನೂ ಬಗೆಹರಿಯಲಾಗದ ಸಮಸ್ಯೆ ಇದ್ದಲ್ಲಿ, ಅದಕ್ಕೂ ಸಹ ಕಾರಣ ತಿಳಿಸಿ 24 ಗಂಟೆಯೊಳಗೆ ಪ್ರತಿಕ್ರಿಯಿಸುವುದಾಗಿ ಶಾಸಕರು ತಿಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]