ಚಿಕ್ಕಬಳ್ಳಾಪುರ: ಸುಧಾಕರ್ (K Sudhakar) ನಮ್ಮೂರ ಹುಡುಗ, ಅವರ ಬಗ್ಗೆ ನನಗೆ ಗೌರವವಿದೆ. ನೀವು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಮುಂದಿನ ಬಾರಿ ವಿಧಾನಸೌಧಕ್ಕೆ ಬರ್ತೀರಾ. ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಮಾಡಿದ್ರೆ ಮತ್ತೆ 5 ವರ್ಷ ಕಷ್ಟಪಡಬೇಕಾಗುತ್ತೆ ಅಂತಾ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರದೀಪ್ ಈಶ್ವರ್ ಬೆಂಬಲಿಗರು ಹಲ್ಲೆಗೆ ಯತ್ನಿಸಿ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದ್ದಾರೆ” ಎಂಬ ಸುಧಾಕರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್ಗೆ ಸುಧಾಕರ್ ಸವಾಲು
Advertisement
Advertisement
ನಮ್ಮ ಹುಡುಗರು ಹಲ್ಲೆ ಮಾಡಿದ್ದಾರೆ, ದಾಳಿ ಮಾಡಿದ್ದಾರೆ ಅನ್ನೋದಾದ್ರೆ ತಾಕತ್ತಿದ್ದರೆ ಪ್ರೂಫ್ ತೋರಿಸಿ. ನಿಮ್ಮದೇ ಕಾರ್ಯಕರ್ತನನ್ನ ಜೈಲಿಗೆ ಕಳುಹಿಸಿದವರು ನೀವು. ಈಗ ಅವನನ್ನೇ ಜೊತೆಗೆ ಕೂರಿಸಿಕೊಂಡು ಆರೋಪ ಮಾಡ್ತಿದ್ದೀರಾ ಅಂತಾ ಹೇಳಿದ್ದಾರೆ.
Advertisement
ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎಂಬ ಸುಧಾಕರ್ ಸವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾಕೆ ಸುಧಾಕರ್ ಅವ್ರೇ ಬಿಜೆಪಿಯವರು (BJP) ನಿಮಗೆ ಟಿಕೆಟ್ ಕೊಡಲ್ವಾ? ಎರಡು ತಿಂಗಳ ಹಿಂದೆಯೇ ನಾನು ನಿಮ್ಮನ್ನ ಸೋಲಿಸಿದ್ದೇನೆ. ಎರಡು ತಿಂಗಳ ಹಿಂದೆಯಷ್ಟೇ ನಿಮ್ಮನ್ನ ಸೋಲಿಸಿದ್ದೇನೆ. ಮತ್ತೆ ಯಾಕೆ ಬರಬೇಕು. ನೀವು ಬೇಕಾದ್ರೆ 5 ವರ್ಷ ಆದ್ಮೇಲೆ ಪಕ್ಷೇತರರಾಗಿ ಬಂದು ಸ್ಪರ್ಧೆ ಮಾಡಿ ಅಂತಾ ಕುಟುಕಿದ್ದಾರೆ. ಇದನ್ನೂ ಓದಿ: ಸುಧಾಕರ್ ಚಾಲೆಂಜ್ ಸ್ವೀಕರಿಸಿ ಪ್ರತಿ ಸವಾಲು ಎಸೆದ ಶಾಸಕ ಪ್ರದೀಪ್ ಈಶ್ವರ್
Advertisement
ಪ್ರದೀಪ್ ಈಶ್ವರ್ ಮುಖ ನೋಡಿ 5,000 ವೋಟು ಬರಲ್ಲ ಮಾಜಿ ಸಚಿವರ ಹೇಳಿಕೆ ಕುರಿತು ಮಾತನಾಡಿ, ಸ್ವಗ್ರಾಮ ಪೇರೇಸಂದ್ರದಲ್ಲಿ ಯಾಕೆ ನಿಮಗೆ ಕಡಿಮೆ ವೋಟು ಬಂತು? ನನಗೆ 1,700 ವೋಟು ಬಂದ್ರೆ ನಿಮಗೆ ಕೇವಲ 600 ವೋಟ್ ಮಾತ್ರ ಬಂದಿದೆ. ಹುಟ್ಟೂರಲ್ಲೇ ನಿಮಗೆ ಗೌರ ಇಲ್ಲ, ನಿಮ್ಮ ಮರ್ಯಾದೆ ಏನು ಅನ್ನೋದು ಗೊತ್ತಾಯ್ತು ಅಂತ ಲೇವಡಿ ಮಾಡಿದ್ದಾರೆ.
ಮುಂದುವರಿದು, ಸುಧಾಕರ್ ಅವರ ಪಾಡಿಗೆ ಬೆಂಗಳೂರಲ್ಲಿ ಚೆನ್ನಾಗಿ ಇರ್ತಾರೆ, ನಾನು ನನ್ನ ಪಾಡಿಗೆ ಚೆನ್ನಾಗಿರ್ತೆನೆ. ಸುಧಾಕರ್-ಪ್ರದೀಪ್ ಈಶ್ವರ್ ಮಧ್ಯೆ ಬೆಂಬಲಿಗರು ಗಲಾಟೆ ಮಾಡಿಕೊಳ್ಳಬೇಡಿ. ನಿಮ್ಮ ಹೆಂಡ್ತಿ ಮಕ್ಕಳ ಕಣ್ಣಲ್ಲಿ ನೀರು ಹಾಕಿಸಬೇಡಿ ಅಂತ ಮನವಿ ಮಾಡಿದ್ದಾರೆ.
ಬಾಲ ಬಿಚ್ಚಿದ್ರೆ ಕಟ್ ಮಾಡೋದು ಗೊತ್ತು:
ಸುಧಾಕರ್ ನಂಬಿಕೊಂಡ್ರೆ ಕಾರ್ಯಕರ್ತರೇ ನಿಮಗೆ ಚಿಪ್ಪೆ ಗತಿ. ನೀವು ನೋಡದೇ ಇರೋ ಸುಧಾಕರ್ನ ನಾನು ನೋಡಿದ್ದೀನಿ. ಸುಧಾಕರ್ ಬೆಂಬಲಿಗರು ಕಾನೂನು ಕೈಗೆ ಎತ್ತಿಕೊಂಡರೆ ಪಾಠ ಕಲಿಸೋದು ಗೊತ್ತು. ಬಾಲ ಬಿಚ್ಚಿದ್ರೇ ಕಟ್ ಮಾಡೋದು ಗೊತ್ತು ಅಂತಾ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
Web Stories