ಬಳ್ಳಾರಿ: ತನಗೆ ಮತ ಹಾಕದ್ದಕ್ಕೆ ಆಕ್ರೋಶಗೊಂಡು ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮತದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಬುಧವಾರ ಮೈಲಾರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಶಿಲಾನ್ಯಾಸ ಕ್ರಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಹಿಸಿಕೊಳ್ಳಬೇಕು. ಆದರೆ ಮೈಲಾರ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ತನಗೆ ಮತ ಹಾಕಲಿಲ್ಲದ್ದಕ್ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವೇ ವಹಿಸಿಕೊಳ್ಳುವ ಮೂಲಕ ಶಿಲಾನ್ಯಾಸ ಮಾಡಲು ಮುಂದಾಗಿದ್ದಾರೆ.
Advertisement
Advertisement
ಈ ವೇಳೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಶಾಸಕರ ನಡೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪರಮೇಶ್ವರ್ ನಾಯ್ಕ್, 40 ವರ್ಷದಿಂದ ಯಾವ ಶಾಸಕ, ಸಚಿವನೂ ಇಲ್ಲಿ ಕೆಲಸ ಮಾಡಿಲ್ಲ. ಎಲ್ಲಾ ನಾನೇ ಮಾಡಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ್ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ಮಕ್ಕಳಾ ಮತವನ್ನು ಗಡಿಗೆ ಗುರ್ತಿಗೆ ಹಾಕ್ತೀರಾ, ಕೆಲಸಕ್ಕೆ ಮಾತ್ರ ನನ್ನ ಹತ್ತಿರ ಬರುತ್ತಿರಾ ಎಂದು ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಶಾಸಕರ ಪರಮಾಪ್ತನಾದ ತಾಲೂಕು ಪಂಚಾಯಿತಿ ಅಧ್ಯಕ್ಷ ಗ್ರಾಮಸ್ಥರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಶಾಸಕನ ವರ್ತನೆಗೆ ಬೇಸತ್ತ ಜನ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದು ಹೋದರು. ಗ್ರಾಮಸ್ಥರ ವಿರೋಧವನ್ನು ಲೆಕ್ಕಿಸದೇ ನೂತನ ಕಟ್ಟಡದ ಶಿಲಾನ್ಯಸ ನೇರವೇರಿಸಿ ತಮ್ಮ ದಬ್ಬಾಳಿಕೆಯನ್ನು ಪರಮೇಶ್ವರ್ ನಾಯ್ಕ್ ತೋರಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=GG_B4uw-ZGA