ಬೆಳಗಾವಿ: ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಅಧಿಕಾರಿಗಳಿಗೆ, ಜನರಿಗೆ ಅವಾಜ್ ಹಾಕಿ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ್ ಈಗ ಮತ್ತೊಮ್ಮೆ ರೈತರೊಬ್ಬರಿಗೆ ಆವಾಜ್ ಹಾಕಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
Advertisement
ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಶ್ರಯ ಮನೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
Advertisement
ನಮ್ಮ ಮನೆ ನೋಡೋಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದ ರೈತನಿಗೆ, “ಕಿಮ್ಮತ್ತು ಕೊಡ್ತೀನಿ ಅಷ್ಟೇ. ನಾನು ಎಂಎಲ್‍ಎ ನನ್ನನ್ನು ನೀನು ಮನೆಗೆ ಕರೆದುಕೊಂಡು ಹೋಗಬೇಕು. ಇಲ್ಲಿಂದ ನಡಿ… ನೀನು ಹೊಟ್ಟೆಗೆ ಏನು ತಿನ್ನುತ್ತೀಯ” ಎಂದು ನಿಂದಿಸಿದ್ದಾರೆ. “ಇಷ್ಟು ದಿನ ನಿಮ್ಮನ್ನು ನಾಯಿ ಇಟ್ಟ ಹಾಗೆ ಇಟ್ಟಿದ್ದರು. ನಿಮ್ಮ ಬಳಿ ಬರುತ್ತೇನೆ ಎಂದರೆ ಋಣ ಇಟ್ಟುಕೊ ನೀಚ ನನ್ನ ಮಗನೆ. ನನ್ನ ವಿರುದ್ಧ ಬಂದರೆ ಸೆಡ್ಡು ಹೊಡೆಯೋಕೆ ರೆಡಿ ಇದ್ದೀನಿ. ಪಿ ರಾಜೀವ್ ನನ್ನು ಹೆದರಿಸುವರು ಯಾರೂ ಇಲ್ಲ ಈ ತಾಲೂಕಿನಲ್ಲಿ” ಎಂದು ಆವಾಜ್ ಹಾಕಿದ್ದಾರೆ.
Advertisement
ಶಾಸಕರು ಬಡವರಿಗಾಗಿ ಶ್ರಮಿಸಿ ಸರಿಯಾದ ಫಲಾನುಭವಿಗಳಿಗೆ ಮನೆ ಸಿಗಲಿ ಎಂದು ಕಷ್ಟಪಡುತ್ತಿದ್ದಾರೆ ಎಂದು ಜನರು ಅಂದುಕೊಂಡರೂ ಶಾಸಕರು ಈ ರೀತಿಯಾಗಿ ಆವಾಜ್ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.