ಯಾದಗಿರಿ: ಅನ್ಯ ಧರ್ಮದವರು ಆಸೆಯನ್ನು ಹುಟ್ಟಿಸಿ ಮತಾಂತರ ಮಾಡೋದು ಅಪರಾಧ, ಇಂತಹ ಕೆಲಸಕ್ಕೆ ನಾವು ಬ್ರೇಕ್ ಹಾಕುವ ಕೆಲಸ ಮಾಡುತ್ತೇವೆ. ನಮ್ಮ ಬಂಜಾರ ಸಂಸ್ಕೃತಿ ಪರಂಪರೆ ಉಳಿಸುತ್ತೆವೆ. ಇದಕ್ಕಾಗಿ ಸಂತರ ನಡೆ ತಾಂಡಗಳ ಕಡೆ ಅಭಿಯಾನ ಆರಂಭಿಸಲಾಗಿದೆ ಎಂದು ಶಾಸಕ ಪಿ.ರಾಜೀವ್ ತಿಳಿಸಿದರು.
Advertisement
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ಬಡವರನ್ನು ಹಾಗೂ ದಲಿತರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಿಸುತ್ತಾರೆ. ಅದಕ್ಕಾಗಿ ಸಂತರ ನಡೆ ತಾಂಡಗಳ ಕಡೆ ಅಭಿಯಾನ ಆರಂಭಿಸಿಲಾಗಿದೆ ಎಂದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್
Advertisement
Advertisement
ಮೂಢನಂಬಿಕೆ ಬಿತ್ತಿ, ಆಸೆ ತೋರಿಸುತ್ತಾರೆ, ಮದುವೆ ಮಾಡುತ್ತೇವೆ, ನೌಕರಿ ಕೊಡಿಸುತ್ತೇವೆ ಬನ್ನಿ ಎಂದು ಹೇಳುತ್ತಾರೆ. ಕೆಲ ಕ್ರಿಶ್ಚಿಯನ್ ಮಷಿನರಿಗಳು ಈ ಕೆಲಸ ಮಾಡುತ್ತಿದ್ದು, ಇಂತಹ ಕೆಲಸ ಆಗಬಾರದು. ಆಸೆ ಆಕಾಂಕ್ಷೆ ತೋರಿಸಿ ಮತಾಂತರ ಮಾಡಿಸುವುದು ಕಾನೂನು ಬಾಹಿರ, ಇಂತಹವರ ವಿರುದ್ಧ ಕೇಸ್ ಹಾಕಬೇಕು ಎಂದು ಹೇಳಿದರು.