– ಓರ್ವ ಆರೋಪಿ ಅರೆಸ್ಟ್
ಚಿಕ್ಕಮಗಳೂರು: ಮೂಡಿಗೆರೆ (Mudigere) ಶಾಸಕಿ ನಯನಾ ಮೋಟಮ್ಮ (Nayana Motamma) ಅವರಿಗೆ ಫೇಸ್ ಬುಕ್, ಇನ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್ ಕಾಟ ಆರಂಭವಾಗಿದೆ. ಇದರಿಂದ ಅವರು ಬೇಜಾರ್ ಆಗಿದ್ದಾರೆ. ಈಗಾಗಲೇ ಓರ್ವನ ವಿರುದ್ಧ ದೂರು ನೀಡಿ, ಜೈಲಿಗೆ ಹಾಕಿಸಿರುವ ಶಾಸಕಿ ಇನ್ನೂ ದೂರು ಕೊಡಲ್ಲ ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನ, ಎಂ.ಎಲ್.ಎ ಪದವಿ ಪಾರ್ಟ್ ಟೈಂ, ಸೋಶಿಯಲ್ ಮೀಡಿಯಾ ಫುಲ್ ಟೈಂ. ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದೀರಲ್ಲ, ಒಮ್ಮೆ ಅಲ್ಲಿ ಓಡಾಡಿ, ಇನ್ನೂ ಬ್ಯೂಟಿಫುಲ್ ಆಗಿರ್ತೀರಾ. ಈಯಮ್ಮನಿಗೆ ಮತ ಹಾಕಿ ಗೆಲ್ಲಿಸಿದ್ದಕ್ಕೆ ಸಾರ್ಥಕವಾಯಿತು. ಇವರೇನು ಶಾಸಕರೋ ಅಥವಾ ಸೋಶಿಯಲ್ ಮೀಡಿಯಾ ಪ್ರಭಾವಿತರಾ ಎಂದೆಲ್ಲಾ ಜನ ಮೆಸೇಜ್ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಶಾಸಕರಾದ ಕೂಡಲೇ ನಮಗೆ ವೈಯಕ್ತಿಕ ಜೀವನ ಇರಲ್ವಾ? ಗಂಡ-ಮಕ್ಕಳು, ಸಂಸಾರ, ಸ್ನೇಹಿತರು ಇರಲ್ವಾ ಎಂದು ಕಿಡಿಕಾರಿದ್ದಾರೆ. ನಾವು ಕೆಲಸ ಮಾಡುತ್ತಿಲ್ಲವಾ ಎಂದು ಪೋಲಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್
ಪರ್ಸನಲ್ ಮತ್ತು ರಾಜಕೀಯ ವಿಚಾರವಾಗಿ ಶಾಸಕಿ ಎರಡು ಇನ್ಸ್ಟಾ ಖಾತೆಗಳನ್ನ ಹೊಂದಿದ್ದಾರೆ. ಪರ್ಸನಲ್ ಖಾತೆಗೆ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ವ್ಯಾಯಾಮ ಮಾಡಿದ್ರೂ ತಪ್ಪಾ? ಬರ್ತಡೇ ಆಚರಿಸಿದ್ರೆ ತಪ್ಪಾ. ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ. ಅಶ್ಲೀಲ ಕಮೆಂಟ್ ಸಂಬಂಧ ಕಾರ್ಯಕರ್ತರು ದೂರು ನೀಡಿದ್ದಾರೆ. ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ನಾನು ಧೈರ್ಯವಾಗಿ ಜೀವನ ಮಾಡ್ತೇನೆ. ನನಗೆ ಯಾರ ಭಯವಿಲ್ಲ. ನಾನು ಯಾವುದೇ ದೂರನ್ನು ಕೊಡುವುದಿಲ್ಲ. ನಾನು ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂದು ಗುಡುಗಿದ್ದಾರೆ.
ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ನಾನು ಹೇಗಿದ್ದೆನೋ ಈಗಲೂ ಅದೇ ರೀತಿ ಇರಲು ಪ್ರಯತ್ನ ಮಾಡುತ್ತೇನೆ. ರಾಜಕೀಯ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂದಿದ್ದಾರೆ.
ಇನ್‍ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್ ಪ್ರಕರಣ ಸಂಬಂಧ ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನ ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾ ವಿರುದ್ಧ ಅಶ್ಲೀಲ ಸಂದೇಶ; ಬಂಧಿತರ ಸಂಖ್ಯೆ 12ಕ್ಕೆ ಏರಿಕೆ


