ಬೆಂಗಳೂರು: ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಮುಳಬಾಗಿಲು ಪಕ್ಷೇತರ ಶಾಸಕ ಆರ್.ಶಂಕರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಶಂಕರ್ ಜೊತೆಗೆ ಬಿಜೆಪಿ ಶಾಸಕರ ಆರ್.ಅಶೋಕ್ ಮತ್ತು ಅಶ್ವಥ್ ನಾರಾಯಣ್ ಕೂಡ ಇದ್ದರು. ಎಚ್‍ಎಎಲ್‍ನಿಂದ ನೇರವಾಗಿ 5 ಕಾರ್ ನಲ್ಲಿ ಜಾಲಹಳ್ಳಿಯ ಆರ್.ಅಶೋಕ್ ಮನೆಗೆ ಶಂಕರ್ ಅವರನ್ನು ಕರೆದೊಯ್ಯಲಾಯ್ತು.
ಮುಂಬೈನಿಂದ ನಾಗೇಶ್ ಜೊತೆಗೆ ಬೆಂಗಳೂರಿಗೆಂದು ಹೊರಟಿದ್ದ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಮಾರ್ಗಮಧ್ಯೆ ನಾಪತ್ತೆಯಾಗಿದ್ದಾರೆ. ಪ್ರತ್ಯೇಕವಾಗಿ ಬರುತ್ತೇನೆ ಎಂದು ನಾಗೇಶ್‍ರನ್ನು ಕಳುಹಿಸಿದ್ದ ಶಂಕರ್, ಬೆಂಗಳೂರಿಗೆ ಬರಲೇ ಇಲ್ಲ. ಮುಂಬೈನಿಂದ ನೇರವಾಗಿ ಹೈದ್ರಾಬಾದ್‍ಗೆ ಹಾರಿದ್ದಾರೆ ಎನ್ನಲಾಗಿದೆ.
ಇದೀಗ ಶಂಕರ್ ನಡೆ ಕುತೂಹಲ ಕೆರಳಿಸಿದೆ. ಅನರ್ಹತೆ ಭೀತಿಯಿಂದ ಏನಾದ್ರೂ ಉಲ್ಟಾ ಹೊಡೀತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಸ್ಪೀಕರ್, ರಾಜೀನಾಮೆ ಪ್ರಕರಣವನ್ನು ಮೊದಲು ಇತ್ಯರ್ಥ ಮಾಡ್ತಾರಾ? ಅನರ್ಹತೆ ಪ್ರಕರಣವನ್ನು ಇತ್ಯರ್ಥ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲಿದೆ.