– ಬಯಲು ರಂಗಮಂದಿರ ಇದ್ದ ಕಡೆ ರಾಜಕೀಯ ಚಟುವಟಿಕೆ
– ಪಬ್ಲಿಕ್ ಟಿವಿಯಲ್ಲಿ ಸಾಕ್ಷಿ ಸಮೇತ ಬಿಗ್ ಎಕ್ಸ್‌ಪೋಸ್
ಬೆಂಗಳೂರು: ಬಯಲು ರಂಗ ಮಂದಿರವೆಂದರೆ ಸಾಂಸ್ಕೃತಿಕ ಚಟುವಟಿಕೆಗಳು ನೆನಪಾಗುತ್ತದೆ. ಆದರೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಬಯಲು ರಂಗ ಮಂದಿರವನ್ನು ರಾಜಕೀಯ ಚಟುವಟಿಕೆಗಾಗಿ ಶಾಸಕರ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಮಾಧ್ಯಮದ ವಿರುದ್ಧವೇ ಕಿಡಿಕಾರಿದ್ದಾರೆ.
ಹೌದು, ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 112 ದೊಮ್ಮಲೂರಿನ, ಬಯಲು ರಂಗ ಮಂದಿರವನ್ನು ಶಾಸಕ ಹ್ಯಾರಿಸ್ ತಮ್ಮ ಕ್ಷೇತ್ರದ ಕಚೇರಿಯನ್ನಾಗಿ ಬದಲಾಯಿಸಿದ್ದಾರೆ.
Advertisement
Advertisement
ದೊಮ್ಮಲೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗ ಮಂದಿರ ಬಹಳಷ್ಟು ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿತ್ತು. ಜೊತೆಗೆ ಇದೇ ರಂಗಮಂದಿರದ ಮೊದಲ ಮಹಡಿಯಲ್ಲಿ ಗ್ರಂಥಾಲಯ ಮಾಡುವ ಯೋಚನೆ ಸಹ ಇತ್ತು. ಆದರೆ ಈಗ ಆಗಿರುವುದೇ ಬೇರೆ. ನೂರಾರು ಸಾರ್ವಜನಿಕರ ದೈನಂದಿನ ಉಪಯೋಗಕ್ಕೆ ಬರಬೇಕಿದ್ದ ಈ ರಂಗಮಂದಿರ ಯಾವೊತ್ತೊ ಒಂದು ದಿನ ಬಂದು ಹೋಗುವ ಶಾಸಕರ ಕಚೇರಿಯಾಗಿದೆ.
Advertisement
ಈ ಬಯಲು ರಂಗಮಂದಿರ ನವೀಕರಣಕ್ಕೆ ಇತ್ತೀಚೆಗೆ 3.1 ಕೋಟಿ ರೂ. ಅನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ರಂಗಮಂದಿರದ ಮೊದಲ ಮಹಡಿಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ನಿರ್ಮಿಸಲು ಬಿಬಿಎಂಪಿ ತಯಾರಿ ಮಾಡಿತ್ತು. ಆದರೆ ಹ್ಯಾರಿಸ್ ಅವರು ತಮ್ಮ ಶಾಸಕರ ಕಚೇರಿಯಾಗಿ ಮಾರ್ಪಾಡುಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಲು ಪಬ್ಲಿಕ್ ಟಿವಿ ಹೋದರೆ ಶಾಸಕ ಎನ್.ಎ.ಹ್ಯಾರಿಸ್ ಅವರು ಪ್ರತಿಕ್ರಿಯೆ ಕೊಡಲು ಹಿಂದೇಟು ಹಾಕಿದ್ದಾರೆ ಅಲ್ಲದೇ ಪ್ರಶ್ನೆ ಮಾಡಿದ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.
Advertisement
ಸಾರ್ವಜನಿಕರ ಆಕ್ರೋಶ: ಮೊದಲಿನಿಂದಲೂ ಈ ಬಯಲು ರಂಗಮಂದಿರ ಬಗ್ಗೆ ಅಪಸ್ವರ ಕೇಳಿ ಬರುತ್ತಿವೆ. ಶಂಕರ್ ನಾಗ್ ಬಯಲು ರಂಗ ಮಂದಿರವನ್ನು, ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗ ಮಂದಿರವನ್ನು ಮರುನಾಮಕರಣ ಮಾಡಲಾಗಿದೆ. ಸುಮಾರು 30 ವರ್ಷಗಳ ಹಿಂದೆ ದಿವಂಗತ ಪಟೇಲ್ ಶ್ರೀನಿವಾಸರೆಡ್ಡಿ ನಿರ್ಮಿಸಿದ್ದರು. ಇಷ್ಟು ದಿನ ಮಕ್ಕಳು ಖಾಲಿ ಜಾಗವನ್ನು ಆಟದ ಮೈದಾನವಾಗಿ ಬಳಸುತ್ತಿದ್ದರು. ಆದರೀಗ ಯಾವಾಗಲೂ ಗೇಟ್‍ಗಳಿಗೆ ಬೀಗ ಹಾಕಿರುವುದರಿಂದ ಆಟವಾಡಲು ಸ್ಥಳವಿಲ್ಲದಂತಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಲೆದೂರಿದ ದರೋಡೆ ಪ್ರಕರಣಗಳು
ತೆರಿಗೆದಾರರ ಹಣದಲ್ಲಿ ನಿರ್ಮಿಸಿದ ಮೊದಲ ಮಹಡಿಯನ್ನು ಶಾಸಕರ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ನಾಮಫಲಕವನ್ನು ಸಹ ಅಳವಡಿಸಲಾಗಿದೆ. ಶಾಸಕರ ಕಚೇರಿ ಕೆಡವಿ ಹೊಸ ಕಟ್ಟಡ ನಿರ್ಮಾಣ ಆಗಿರುವುದರಿಂದ ದೊಮ್ಮಲೂರಿನಲ್ಲಿರುವ ಶಾಸಕರ ಕಚೇರಿ ತಾತ್ಕಾಲಿಕವಾಗಿ ಈ ಭಾಗದಲ್ಲಿ ತೆರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಯಂ ಕಚೇರಿ ಮಾಡಲು ರಂಗ ಮಂದಿರವೇ ಬೇಕಿತ್ತಾ ಎಂಬ ಪ್ರಶ್ನೆ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಇದನ್ನೂ ಓದಿ: ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್