ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Muniratna) ಬಂಧನಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕನ ಬಂಧನವಾದ ಒಂದು ದಿನದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ.
ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ (Hanumantarayappa) ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಗುತ್ತಿಗೆದಾರ ಚಲುವರಾಜು ಮತ್ತು ಆತನ ಸ್ನೇಹಿತ ಮಾತಾನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಆಡಿಯೋದಲ್ಲಿ ಚಲುವರಾಜು ಮತ್ತು ಆತನ ಗೆಳೆಯ ಸಹ ಮಾತಾಡಿರುವುದು ಆಡಿಯೋದಲ್ಲಿದೆ. ನಮ್ದು ಸರ್ಕಾರ, ನೀನು ಯಾರ ಕಡೆ ಹೋಗಬೇಡ ಬಾ.. ನಾನು ನಿನ್ನೆ ಸಮಸ್ಯೆ ಬಗೆಹರಿಸುತ್ತೇನೆ.. ನೀನು ನಮ್ಮವನು, ನಮ್ಮ ತಾಲೂಕಿನವನು. ನಿನ್ನ ಸಮಸ್ಯೆ ಬಗೆಹರಿಸುವುದಾಗಿ ಹನುಮಂತರಾಯಪ್ಪ ಗುತ್ತಿಗೆದಾರನಿಗೆ ಭರವಸೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.