ಬೆಂಗಳೂರು: ತಮ್ಮ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್‌ನ (Congress) ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡ ಇದೆ ಅಂತಶಾಸಕ ಮುನಿರತ್ನ (Munirathna) ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಶಾಸಕರು, ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರ್ತೇನೆ. ಕುಸುಮಾ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು ಅವರಿಗೆ ಪರಿಚಯವೇ ಇಲ್ಲ ಅಂತಾ ದೇವರ ಎದುರೇ ಪ್ರಮಾಣ ಮಾಡಿ ಹೇಳಿಬಿಡಲಿ ಅಂತ ಮುನಿರತ್ನ ಸವಾಲು ಹಾಕಿದ್ರು. ಇದನ್ನೂ ಓದಿ: ಸ್ವಯಂ ಪ್ರಚಾರ ಮಾಡಿಕೊಳ್ಳದೇ, ಪ್ರಶಸ್ತಿ ಸ್ವೀಕರಿಸದೇ ದೇಶಸೇವೆ ಮಾಡಿದ್ರು: ವಿರೇಂದ್ರ ಹೆಗ್ಗಡೆ ಸಂತಾಪ
ನೀವು ಬುದ್ದಿವಂತರು, ವಿದ್ಯಾವಂತರು ಕೆಳಮಟ್ಟದ ರಾಜಕಾರಣ ಮಾಡಬೇಡಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಿ, ಅಪಪ್ರಚಾರ ಮಾಡಬೇಡಿ ಅಂತ ಕಿಡಿಕಾರಿದರು. ಇದನ್ನೂ ಓದಿ: ದೆಹಲಿ, ಉತ್ತರಾಖಂಡ್‌ನಲ್ಲಿ ಮಳೆ; ಪಶ್ಚಿಮ ಹಿಮಾಲಯದಲ್ಲಿ ಹಿಮಪಾತ – ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಒಬ್ಬ ಶಾಸಕ ಕ್ಷೇತ್ರದಲ್ಲಿ ಬರಬಾರದು ಅಂತ ಮಾತನಾಡುತ್ತಿರುವುದು ಇದೇ ಮೊದಲು. ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ. ಅದಕ್ಕೆ ನಾವು ಬದ್ಧವಾಗಿರಬೇಕು. ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ ಇದ್ದವರು. ಅವರು ಅವರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ನನ್ನ ಕೇಸ್ ಕೋರ್ಟ್‌ನಲ್ಲಿದೆ. ಕ್ಷೇತ್ರಕ್ಕೆ ಹೋಗುವಹಾಗಿಲ್ಲ ಅಂದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – 42 ಭಕ್ತಾಧಿಗಳ ಸ್ಥಿತಿ ಗಂಭೀರ