ಬೆಂಗಳೂರು: ಗ್ರೇಟರ್ ಬೆಂಗಳೂರು ಬಿಲ್ (Greater Bengaluru Bill) ತಂದಿರೋ ಬೆಂಗಳೂರು ಉಸ್ತುವಾರಿ ಸಚಿವರೇ ಗ್ರೇಟ್. ನಾವು ಗ್ರೇಟ್ ಅಲೆಕ್ಸಾಂಡರ್, ಗ್ರೇಟ್ ಬ್ರಿಟನ್ ಹೆಸರು ಕೇಳಿದ್ದೀವಿ. ಈಗ ಅಂಥದ್ದೇ ಗ್ರೇಟ್ ಹೆಸರು ಕೇಳ್ತಿದೀವಿ. ʻದಿ ಗ್ರೇಟ್ ಡಿಕೆಶಿʼ ಈಗ ಗ್ರೇಟರ್ ಬೆಂಗಳೂರು ತರ್ತಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ (Munirathna) ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿಂದು `ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ಚರ್ಚೆ ವೇಳೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಜಿಎಸ್‌ಟಿ ಸೇರಿ ಯಾವ್ದೇ ತೆರಿಗೆ ಕಡಿಮೆ ಮಾಡಿ ಅಂತ ಸರ್ಕಾರವನ್ನ ಕೇಳಬೇಡಿ: ನಿತಿನ್ ಗಡ್ಕರಿ
- Advertisement
ಗ್ರೇಟರ್ ಬೆಂಗಳೂರು ಬಿಲ್ ತಂದಿರೋ ಬೆಂಗಳೂರು ಉಸ್ತುವಾರಿ ಸಚಿವರೇ ಗ್ರೇಟ್. ನಾವು ಗ್ರೇಟ್ ಅಲೆಕ್ಸಾಂಡರ್, ಗ್ರೇಟ್ ಬ್ರಿಟನ್ ಹೆಸರು ಕೇಳಿದ್ದೀವಿ. ಈಗ ಅಂಥದ್ದೇ ಗ್ರೇಟ್ ಹೆಸರು ಕೇಳ್ತಿದೀವಿ. ʻದಿ ಗ್ರೇಟ್ ಡಿಕೆಶಿʼ ಈಗ ಗ್ರೇಟರ್ ಬೆಂಗಳೂರು ತರ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಮ್ಮ ದೇವರು ನನ್ನನ್ನ ಕರೆಸಿಕೊಳ್ತಿದ್ದಾನೆ – ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ಯುವಕ ನೇಣಿಗೆ ಶರಣು
- Advertisement
ಬೆಂಗಳೂರನ್ನ ಬಹಳ ಹತ್ತಿರದಿಂದ ಡಿಕೆಶಿ ನೋಡಿರೋರು. ಅವರು ಬೆಂಗಳೂರು ನೋಡಿದಾಗ ಟೂ ವೇ ರೋಡ್ ಗಳೇ ಇದ್ದಿದ್ದು, ಒನ್ ವೇ ಇರಲಿಲ್ಲ. ನಮಗೆ ಮೇಕ್ರಿ ಸರ್ಕಲ್ ಇರಲಿಲ್ಲ. 1986 ರಲ್ಲಿ ಸಾರ್ಕ್ ಸಮ್ಮೇಳನ ನಂತರವೇ ಬೆಂಗಳೂರು ಎಲ್ಲರ ಕಣ್ಣಿಗೆ ಬಿತ್ತು, ಅಲ್ಲೀವರೆಗೂ ಬಿದ್ದಿರಲಿಲ್ಲ. ಬಂತರ ವಿಶ್ವ ಸುಂದರಿ ಸ್ಪರ್ಧೆ ನಡೀತು, ಆಗ ಇನ್ನೂ ಜಾಸ್ತಿ ಗಮನ ಸೆಳೆಯಿತು. ನಂತರ 2001 ರಲ್ಲಿ ಐಟಿಬಿಟಿ ಬಂದ ನಂತರ ಪ್ರಪಂಚ ನೋಡುವ ಹಾಗಾಯ್ತು. ಇಂಥ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡ್ತಿದ್ದಾರೆ. ಇರಲಿ, ಏನೋ ಕೊಡುಗೆ ಬೆಂಗಳೂರಿಗೆ ಕೊಡಬೇಕು ಅನ್ಕೊಂಡಿದ್ದಾರೆ, ಕೊಡಲಿ ಅಂತ ಟಾಂಗ್ ನೀಡಿದರು.