- ನನ್ನ ಪ್ರಾಣ ಇರೋವರೆಗೂ ಬಿಜೆಪಿಯಲ್ಲೇ ಇರ್ತೇನೆ
ಬೆಂಗಳೂರು: ಸಿದ್ದರಾಮಯ್ಯನವ್ರು (Siddaramaiah) 11 ಕೆವಿ ಕರೆಂಟ್ ಅಲ್ಲ, 660 ಕೆವಿ ಕರೆಂಟ್. ಅವರನ್ನ ಮುಟ್ಟಿದ್ರೆ ಸುಟ್ಟು ಹೋಗ್ತಾರೆ ಎಂದು ಬಿಜೆಪಿ (BJP) ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಸಿದ್ದರಾಮಯ್ಯ ಅವರ ಶಕ್ತಿ ನಾನು ನೋಡಿದ್ದೇನೆ. ಅವರು ಏನು, ಅವರ ಶಕ್ತಿ ಏನು ಅಂತ ನನಗೆ ಗೊತ್ತಿದೆ. ನಾನು ಅವರ ಜೊತೆ ಐದು ವರ್ಷ ಕೆಲಸ ಮಾಡಿದ್ದೇನೆ. ಅವರಿದ್ರೆ ಜನ, ಅವರಿಲ್ಲದಿದ್ರೆ ಹಣ ಕೊಟ್ಟು ಜನರನ್ನ ಕರೆದು ಕೂರಿಸಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ.
Advertisement
ಕಾಂಗ್ರೆಸ್‍ನಲ್ಲಿ ಕಣ್ಣಿಲ್ಲದ ಮೈತ್ರಿ ಇದೆ. ಅಂದು ಸಿಎಂ, ಡಿಸಿಎಂ ಎರಡು ಪಕ್ಷದ ಮೈತ್ರಿಯಲ್ಲಿದ್ದ ಪರಿಸ್ಥಿತಿ ಇದೆ. ಇಂದು ಕುಮಾರಸ್ವಾಮಿ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. ಪರಮೇಶ್ವರ್ ಜಾಗದಲ್ಲಿ ಡಿಸಿಎಂ ಇದ್ದಾರೆ. ಡಿಸಿಎಂ ಅವರೇ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳು ಎಂದಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿದ್ರೆ 135 ಸೀಟು, ಆಚೆ ಹೋದ್ರೆ ಶೂನ್ಯವಾಗಲಿದೆ. ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಆರೇ ತಿಂಗಳಿಗೆ ಚುನಾವಣೆ ಬರುತ್ತೆ. ಹಾಗಾಗಿ ನಮ್ಮ ಪಕ್ಷದಲ್ಲಿ ಎಲ್ರೂ ಒಗ್ಗಟ್ಟಾಗಬೇಕು. ಕಾಂಗ್ರೆಸ್ (Congress) ನಲ್ಲಿ ಸಿದ್ದರಾಮಯ್ಯ ಇಳಿಸೋ ಪ್ರಯತ್ನ ನಡೀತಿದೆ ಎಂದು ಹೇಳಿದ್ದಾರೆ.
33 ಜನ ಸಚಿವರಲ್ಲಿ ಯಾರು ಗಂಗೆ ಸ್ನಾನ ಮಾಡಿದ್ದಾರೋ ಅವರೇ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳು ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದಾರೆ.
ನನಗೆ ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿಲ್ಲ. ನನ್ನ ಪ್ರಾಣ ಇರೋವರೆಗೂ ಬಿಜೆಪಿಯಲ್ಲೇ ಇರ್ತೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.