ಬೆಂಗಳೂರು: ನಾನೇ ಮೇಧಾವಿ, ನಾನೇ ಬುದ್ಧಿವಂತ ಅಂದುಕೊಂಡಿದ್ದಾರೆ. ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ. ಸಚಿವರು ಇನ್ನೂ ಮುಂದಾದರೂ ಚೆನ್ನಾಗಿ ಕೆಲಸ ಮಾಡಿ. ಏನೇನೋ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
Advertisement
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಸದನದ ಒಳಗೆ ವಿಪಕ್ಷಗಳನ್ನ ಸಮರ್ಥವಾಗಿ ಹಣಿಯುತ್ತಾರೆ. ಆದರೆ ಹೊರಗಡೆ ಯಾಕೆ ಈ ರೀತಿ ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ. ಯಾವ ಯಾವ ಕಾರಣಕ್ಕೋ ಸಚಿವರಾಗಿದ್ದಾರೆ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಹಾದಿ ಬೀದಿಯಲ್ಲಿ ಚರ್ಚೆ ಮಾಡಲ್ಲ ಎಂದು ಗರಂ ಆದರು. ಇದನ್ನೂ ಓದಿ: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈ ಈಗ ಟಾಪ್ 5 ನಾಯಕ
Advertisement
Advertisement
ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಕೇವಲ ಘೋಷಣೆ ಮಾಡಿಲ್ಲ, ಅನುಷ್ಠಾನಕ್ಕೆ ತಂದಿದ್ದೇವೆ. ಸಿಎಂ ಬೊಮ್ಮಾಯಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ನೋ ಅಡ್ಜಸ್ಟ್‍ಮೆಂಟ್ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅಂತಾ ನಿಮ್ಮ ತಂದೆ-ತಾಯಿ ದೇವರ ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯಗೆ ಅಧಿಕಾರದ ಹುಚ್ಚು. ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಭ್ರಮೆಯಲ್ಲಿ ಇದ್ದಾರೆ ಎಂದರು.
Advertisement
ಈ ದೇಶದ ಒಂದೊಂದು ಇಂಚು ಭೂಮಿ ನಮಗೆ ಸೇರಿದ್ದು. ವಕ್ಫ್ ಬೋರ್ಡ್ ಸುಪ್ರೀಂ ಆಗಿದ್ಯಾ? ಸರ್ಕಾರಕ್ಕಿಂತ ಇವರು ಕೆಲಸ ಮಾಡಿದ್ದಾರಾ? ಸಾವರ್ಕರ್ ಫೋಟೋ ಎಲ್ಲಿ ಬೇಕಾದರೂ ಇಡಬಹುದು. ಇವರು ಯಾರು ಹೇಳೋದಕ್ಕೆ?, ಯಾರನ್ನು ಕೇಳಿ ಟಿಪ್ಪು ಜಯಂತಿ ಘೋಷಣೆ ಮಾಡಿದ್ರಿ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: ಫಸ್ಟ್ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ ವಿಶ್ವದ ಅತಿ ದೊಡ್ಡ ಸೂಪರ್‌ಜಂಬೋ ವಿಮಾನ
ತಾಕತ್ ಇದ್ರೆ ನಾನೊಬ್ಬ ಹಿಂದೂ ಅಂತ ಹೇಳಿ ಸಿದ್ದರಾಮಯ್ಯಗೆ ರೇಣುಕಾಚಾರ್ಯ ಸವಾಲೆಸೆದರು. ನಾಚಿಕೆ ಆಗಬೇಕು, ವೋಟ್ ಬ್ಯಾಂಕ್ ರಾಜಕಾರಣ ಬಿಡಿ. ಹಿಂದೂ, ಮುಸ್ಲಿಂ ಭಾರತ ಮಾತೆಯ ಮಕ್ಕಳು. ಯಡಿಯೂರಪ್ಪ, ಬೊಮ್ಮಾಯಿ ಸಾಧನೆ ಜನರಿಗೆ ತಲುಪಬಾರದು. ಅಂತಾ ಈ ರೀತಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೀವು ರಾಮನ ಜಪ ಮಾಡಿ. ಪ್ರವೀಣ್, ಹರ್ಷ ಸೇರಿ ಹಲವರ ಹತ್ಯೆಗೆ ನೀವು ಕಾರಣ. ರಾಜ್ಯದ ಜನರ ಕ್ಷಮೆ ಕೇಳಿ ಎಂದು ಇದೇ ವೇಳೆ ಎಂಪಿಆರ್ ಆಗ್ರಹಿಸಿದರು.