ಬೆಂಗಳೂರು: ಕನಕಪುರ ಬಂಡೆ ಲೂಟಿ ಮಾಡಿರುವ, ಸ್ವತಃ ಜೈಲಿಗೆ ಹೋಗಿ ಬಂದಿರುವ ಡಿಕೆಶಿಗೆ ಮಾತಾನಾಡುವ ನೈತಿಕತೆ ಇಲ್ಲ. ಡಿ.ಕೆ.ಸುರೇಶ್ ರಾಮನಗರದಲ್ಲಿ ಅಶ್ವಥ್ ನಾರಾಯಣ್ ಅವರ ಮುಂದೆ ಯಾವ ರೀತಿ ಗೂಂಡಾಗಿರಿ ಮಾಡಿದ್ದಾರೆ ಅನ್ನೋದು ಗೊತ್ತಿದೆ ಅಂತಾ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ರು. ವಿಧಾನಸೌಧದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರು ಅಂತಾ ಕಿಡಿಕಾರಿದ್ರು.
ಈಶ್ವರಪ್ಪ ಅವರು ಸ್ವತ: ಅವರೇ ರಾಜೀನಾಮೆ ನೀಡಿದ್ರು, ಸುರೇಶ್ ಮತ್ತು ಅಶ್ವಥ್ ನಾರಾಯಣ್ ಸಮ್ಮುಖದಲ್ಲಿ ಗೂಂಡಾ ರೀತಿಯಲ್ಲಿ ಮಾಡಿದ್ದು ಜನ ನೋಡಿದ್ದಾರೆ. ಅಶ್ವಥ್ ನಾರಾಯಣ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ ಅಂತಾ ಕಿಡಿಕಾರಿದ್ರು. ನಮ್ಮ ಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ನಾನು ಸಿಎಂ ಆಗಬೇಕು ಅಂತಾ ಪೈಪೋಟಿ. ಡಿಕೆಶಿಗೆ ನಿವು ಬೆಂಬಲ ನೀಡಿದ್ರೆ, ನಿಮಗೆ ಒಳ್ಳೆಯದಾಗಲ್ಲ. ಸಿದ್ದರಾಮಯ್ಯ ಅವರೇ ಡಿಕೆಶಿ ಇಂದ ದೂರ ಇರಿ ಅಂತಾ ವ್ಯಂಗ್ಯವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಡಿಕೆಶಿ ಸಾಮಾನ್ಯ ವ್ಯಕ್ತಿಯಲ್ಲ – KPSCಯಲ್ಲಿ ಕಾಂಗ್ರೆಸ್‍ನಿಂದ ದೊಡ್ಡ ಭ್ರಷ್ಟಾಚಾರ: ಎಚ್‍ಡಿಕೆ ಬಾಂಬ್
ಸಚಿವ ವಿ.ಸೋಮಣ್ಣ ಮಾತನಾಡಿ, ಈ ಹಗರಣ ಬಯಲಿಗೆ ತಂದಿದ್ದು ಕಾಂಗ್ರೆಸ್ ಅಲ್ಲ. ಕಾನೂನು ಚೌಕಟ್ಟಿನಲ್ಲಿ ಯಾರೂ ದೊಡ್ಡವರಲ್ಲ. ಇವರು ಇಷ್ಟೆಲ್ಲಾ ಆರೋಪ ಮಾಡುತ್ತಾರೆ ಒಂದು ದಾಖಲಾತಿ ತೋರಿಸಿ ಅಂತಾ ಸವಾಲು ಹಾಕಿದ್ರು. ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅನುಭವಸ್ಥರು ಮಾಹಿತಿ ತೆಗೆದುಕೊಂಡು ಮಾತಾಡಬೇಕು. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಅವರು ಜವಾಬ್ದಾರಿ ಅನುಭವ ಇದೆ. ಅವರ ಹೇಳಿಕೆಯಲ್ಲಿ ಗಾಂಭೀರ್ಯ ಇರಬೇಕು. ಅಶ್ವಥ್ ನಾರಾಯಣ್ ಅವರಲ್ಲಿ ಪಾಯಿಂಟ್ ತಪ್ಪು ಇದ್ರೆ ತೋರಿಸಿ, ಸುಮ್ಮನೆ ಆರೋಪ ಮಾಡುವುದು ಕಾಂಗ್ರೆಸ್‍ಗೆ ಶೋಭೆ ತರಲ್ಲ ಅಂದ್ರು. ಇದನ್ನೂ ಓದಿ: ನರ್ಸ್ ಸರ್ಟಿಫಿಕೇಟ್ ದಂಧೆಯಲ್ಲಿ ಅಶ್ವಥ್ ನಾರಾಯಣ್ ಭಾಗಿಯಾಗಿದ್ದಾರೆ: ಕುಮಾರಸ್ವಾಮಿ