ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಚಿತ್ರ-ಶ್ರೀ ಮುರಳಿ

Public TV
1 Min Read
Pratham and shrimuruli

ಬೆಂಗಳೂರು: ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ ಅಂತಾ ಖ್ಯಾತ ನಟ ಶ್ರೀಮುರಳಿ ಹೇಳಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ, ನಟ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮ ಹುಡುಗ ಪ್ರಥಮ್ ಚಿತ್ರದ ಹಾಡನ್ನು ನಮ್ಮಿಂದಲೇ ಲಾಂಚ್ ಮಾಡ್ಸಿದ್ರು. ನಾನು ಈ ಚಿತ್ರದ ಹಾಡೊಂದನ್ನು ನೋಡಿದ್ದು ಅದು ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಹಾಡು ನೋಡಿ ತುಂಬಾನೇ ಖುಷಿ ಆಯ್ತು. ಪ್ರಥಮ್ ರವರಲ್ಲಿ ಒಂದು ರೊಮ್ಯಾಂಟಿಕ್ ಭಾವನೆ ಅಡಗಿದೆ. ಅದನ್ನು ಪರದೆಯ ಮೇಲೆ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ. ಹಾಡುಗಳಲ್ಲಿ ಪ್ರಥಮ್ ನಟನೆಯನ್ನು ನೋಡಿ ನನಗೇ ಶಾಕ್ ಆಯ್ತು ಅಂತಾ ಅಂದ್ರು.

ಆ ಹಾಡಿನಲ್ಲಿ ಅವರ ಅಭಿನಯ, ವಾಕಿಂಗ್ ಶೈಲಿ, ನೋಟ ಎಲ್ಲವೂ ಸಖತ್ತಾಗಿ ಮೂಡಿಬಂದಿದೆ. ಒಬ್ಬರ ಜೀವನದಲ್ಲಿ ಆಗುವ ಬದಲಾವಣೆ ಅವರನ್ನು ಇನ್ನೂ ಹೆಚ್ಚಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತವೆ. ಆ ಸಾಲಿಗೆ ಪ್ರಥಮ್ ಸೇರುತ್ತಾರೆ. ಅವರ ಆ ಶಕ್ತಿಯೇ ಅವರನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತೆ ಅಂತಾ ಹಾರೈಸಿದರು.

ಉತ್ತಮ ವಿಚಾರಗಳಿಂದ ಕೂಡಿರುವ ಪ್ರಥಮ್ ವಿಚಾರಗಳು ಅವರನ್ನು ಇನ್ನಷ್ಟು ಬೆಳೆಸುತ್ತವೆ. ಪ್ರಥಮ್ ರ ಈ ಹೊಸ ಪ್ರಯತ್ನವನ್ನು ಕೊಂಡಾಡಿದ ಶ್ರೀಮುರುಳಿ ಎಂಎಲ್‍ಎ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *