ದಾವಣಗೆರೆ: ನಮ್ಮ ಪಕ್ಷದ ಶಾಸಕರನ್ನು ಖರೀದಿ (Operation Kamala) ಮಾಡುವ ಕೆಪಾಸಿಟಿ ಬಿಜೆಪಿಗರಿಗೆ (BJP) ಇಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ನನ್ನ ಹತ್ತಿರ ಇದುವರೆಗೂ ಯಾರು ಕೂಡ ಬಂದು, ಶಾಸಕರ ಖರೀದಿ ವಿಚಾರದ ಬಗ್ಗೆ ಮಾತಾಡಿಲ್ಲ. ಸಿಎಂ ಹೇಳುತ್ತಿದ್ದಾರೆ ಎಂದರೆ ಅವರು ಖಚಿತ ಮಾಹಿತಿ ಪಡೆದುಕೊಂಡೇ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವಿಚಾರದ ಬಗ್ಗೆ ನಮ್ಮ ಆತ್ಮೀಯ ಸ್ನೇಹಿತ ರವಿ ಹೇಳಿದ್ದಾನೆ ಎಂದರೆ ಸತ್ಯ ಇರುತ್ತದೆ. ದಾವಣಗೆರೆಯಲ್ಲಿಯೇ ಆರೇಳು ತಿಂಗಳ ಹಿಂದೆಯೇ ರವಿ ಗಣಿಗ ಹೇಳಿದ್ದರು ಎಂದಿದ್ದಾರೆ.
ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮದ ಬಗ್ಗೆ ನಾವೇನು ಪ್ರತಿಕ್ರಿಯೆ ನೀಡೋದಿಲ್ಲ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಕ್ರಮ ವಹಿಸುತ್ತಾರೆ. ಜಮೀರ್ ಅವರು ನಾವು ತುಂಬಾ ಅತ್ಮೀಯರು. ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದಿದ್ದಾರೆ.