ಬೆಳಗಾವಿ: ನಗರವನ್ನು ಬಹುತೇಕ ಮಳೆ ಪ್ರವಾಹದಲ್ಲಿ ಮುಳಿಗಿಸಿದ್ದು, ಜನರ ಜೀವನ ಅಪಾಯದಲ್ಲಿ ಸಿಲುಕಿದೆ. ಪ್ರವಾಹದಲ್ಲಿ ಸಿಲುಕಿರುವ ನೆರವಿಗೆ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯ ಚಂದನಹೊಸೂರ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕಿ, ಗ್ರಾಮದ ಮಹಿಳೆಯೊಬ್ಬರಿಗೆ ಸಾಂತ್ವನ ಹೇಳಿರುವ ಫೋಟೋಗಳನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಗ್ರಾಮದ ಮಹಿಳೆಯ 30 ವರ್ಷದ ಅಳಿಯ ತೀರಿಕೊಂಡಿದ್ದು, ತನ್ನ 25 ವರ್ಷದ ಮಗಳು, ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಾರೆ. ಪ್ರಕೃತಿ ವಿಕೋಪಕ್ಕೆ ಇರುವ ಮನೆಯನ್ನು ಕಳೆದುಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Advertisement
ಚಂದನಹೊಸೂರ ಗ್ರಾಮದ ಈ ಬಡ ಮಹಿಳೆಯ ಮೂವತ್ತು ವಯಸ್ಸಿನ ಅಳಿಯ ತೀರಿಕೊಂಡಿದ್ದರ ಕಾರಣ ತನ್ನ ಇಪ್ಪತೈದು ವಯಸ್ಸಿನ ಮಗಳು ವಿಧುವೆಯಾಗಿದ್ದು, ಎರಡು ಮೊಮ್ಮಕ್ಕಳನ್ನು ಕಟ್ಟಿಕೊಂಡು ಪ್ರಕೃತಿಯ ವಿಕೋಪದ ಕಾರಣ ಮಳೆಯ ಆರ್ಭಟದಿಂದ ಮನೆಯನ್ನು ಕೂಡ ಕಳೆದುಕೊಂಡಿದ್ದಾಳೆ, ಈ ಮಹಿಳೆಗೆ ಧೈರ್ಯವನ್ನು ತುಂಬಿ ಸಮಾಧಾನವನ್ನು ಹೇಳಲಾಯಿತು.. pic.twitter.com/9HvaeMg0hR
— Laxmi Hebbalkar (@laxmi_hebbalkar) August 7, 2019
Advertisement
ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯ ಕಳೆದುಕೊಳ್ಳಬೇಡಿ. ಬೇರೆಯವರ ಮೇಲೆ ಆರೋಪ ಮಾಡುವ ಬದಲು ಎಲ್ಲರೂ ಒಟ್ಟಿಗೆ ಕೂಡಿ ಜನರ ನೆರವಿಗೆ ಬರಬೇಕಿದೆ. ಸೇತುವೆಗಳ ಬಳಿ ತೆರಳಿದ ಸಂದರ್ಭದಲ್ಲಿ ಹಾಗೂ ಹೆಚ್ಚು ನೀರು ಹರಿಯುತ್ತಿರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇದ್ದು, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಿರಿ. ಜಿಲ್ಲಾಡಳಿತ, ಸರ್ಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಮನವಿ ಮಾಡಿದ್ದಾರೆ.