ಬೆಳಗಾವಿ: ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಇರುವುದು ರೈತ ಮಹಿಳೆ. ನಾನು ಕಾಂಗ್ರೆಸ್ಸಿನವಳು. ಹೀಗಾಗಿ ಪಕ್ಷದ ಚಿಹ್ನೆಯಲ್ಲಿ ತೆನೆ ಹೊತ್ತ ರೈತ ಮಹಿಳೆಯನ್ನು ಇಟ್ಕೊಂಡು ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ ಚಿಹ್ನೆ ರೈತ ಮಹಿಳೆಯಾಗಿದೆ. ಹೀಗಾಗಿ ರೈತ ಮಹಿಳೆಯ ಮೇಲೆ ಜೆಡಿಎಸ್ ನವರಿಗೆ ಮರ್ಯಾದೆ(ಗೌರವ) ಇಲ್ಲ ಅಂತಂದ್ರೆ ಏನ್ ಹೇಳಲಿ. ರೈತ ಮಹಿಳೆಯನ್ನು ತಮ್ಮ ಸಿಂಬಲ್ ಆಗಿ ಇಟ್ಕೊಂಡು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ಅವರು ತಿಳಿಸಿದ್ರು.
Advertisement
Advertisement
ಮುಖ್ಯಮಂತ್ರಿಗಳು ಯಾವುದೋ ಒಂದು ಉದ್ವೇಗದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಿದ್ದಿಯಮ್ಮಾ, ಯಾಕೆ ವಿಚಾರ ಮಾಡಿಲ್ಲ ಅಂತ ಹೇಳಬಹುದಾಗಿತ್ತು. ಆದ್ರೆ ಉದ್ವೇಗದಲ್ಲಿ ಅದೊಂದು ಪದವನ್ನು ಬಳಸಿದ್ದಾರೆ. ರಾಜಕಾರಣದಲ್ಲಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಮಾತು ಆಡಿದ್ರೆ ಸಾಕು, ಮುತ್ತು ಒಡೆದ್ರೆ ಹೋಯ್ತು ಅನ್ನೋ ಪರಿಸ್ಥಿತಿ ಬಂದಿದೆ ಅಂದ್ರು.
Advertisement
ಒಂದು ಪಕ್ಷದ ಚಿಹ್ನೆಗೆ ನಾವು ಪೂಜೆ ಮಾಡುತ್ತೇವೆ. ನಮ್ಮ ಉಸಿರು ಏನಪ್ಪ ಅಂದ್ರೆ ನಮ್ಮ ಚಿಹ್ನೆ ಆಗಿರುತ್ತದೆ. ಹೀಗಾಗಿ ರೈತ ಮಹಿಳೆಯನ್ನೇ ಚಿಹ್ನೆಯಾಗಿ ಇಟ್ಕೊಂಡಿದ್ದಾರೆ ಅಂತ ಹೇಳುವ ಮೂಲಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಹೆಬ್ಬಾಳ್ಕರ್ ಟಾಂಗ್ ನೀಡಿದ್ರು.
Advertisement
ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಸಭೆಗೆ ನನಗೆ ಆಹ್ವಾನವಿಲ್ಲ. ನಾನು ಈ ಬಾರಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ. ಈಗ ಅಂಬೆಗಾಲು ಇಡುತ್ತಿದ್ದೇನೆ. ಸರಕಾರವು ಸಕ್ಕರೆ ಮಾಲೀಕರ ಜೊತೆ ಯಾವ ತೀರ್ಮಾನ ಕೈಗೊಳ್ಳುತ್ತೆ ಅದಕ್ಕೆ ನಾನು ಬದ್ಧವಾಗಿದ್ದೇನೆ. ನಾನು ರೈತರ ಹಿತ ಕಾಪಾಡುವ ಉದ್ದೇಶದಿಂದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ ಅಂದ್ರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಕಾಯಕವೇ ಕೈಲಾಸ ಅನ್ನೋ ರೀತಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ನಾನು ಸಿದ್ಧಳಾಗಿದ್ದೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv