ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೋಗುತ್ತಿದ್ದಾರೆ. ನಾನು ವಾಸ್ತು ಹಾಗೂ ಭವಿಷ್ಯವನ್ನು ನಂಬುತ್ತೇನೆ ಎಂದು ಹೇಳಿದ್ದಾರೆ.
ನಾನೂ ಕೂಡಾ ವಾಸ್ತು ಫಾಲೋ ಮಾಡುತ್ತೀನಿ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸ್ವಲ್ಪ ಸಮಯ ನೋಡುತ್ತೇನೆ. ದಿನಾಲು ರಾಶಿ ಭವಿಷ್ಯ ನೋಡುತ್ತೇನೆ. ರಾಶಿ ಭವಿಷ್ಯದ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ಉಡುಗೆ ತೊಡುಗೆಯಲ್ಲಿ ನಾನು ವಾಸ್ತು ನೋಡುತ್ತೀನಿ. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಅಂತ ನೋಡುತ್ತೀನಿ. ಮನೆಯಲ್ಲಿ ಹಿರಿಯರಿಂದ ದೇವರ ಭಕ್ತಿ, ವಾಸ್ತು, ಸಂಪ್ರದಾಯದ ಚಾಲ್ತಿಯಲ್ಲಿದೆ. ಹೀಗಾಗಿ ನಾನೂ ಕೂಡಾ ವಾಸ್ತು ಫಾಲೋ ಮಾಡುವದರ ಜೊತೆಗೆ ರಾಹುಕಾಲ ನಂಬುತ್ತೇನೆ ಎಂದರು.
Advertisement
Advertisement
ವಾಸ್ತು ಫಾಲೋ ಮಾಡುವುದ್ದಕ್ಕೆ ಸಚಿವ ರೇವಣ್ಣ ಅವರು ನಿಮಗೆ ಪ್ರೇರೆಣೆ ನಾ? ಎಂದು ಪ್ರಶ್ನಿಸಿದ್ದಕ್ಕೆ, ನಗುತ್ತ ನನಗೆ ರೇವಣ್ಣ ಅವರು ಪ್ರೇರಣೆ ಅಲ್ಲ. ನನಗೆ ನನ್ನ ತಂದೆ- ತಾಯಿ ಪ್ರೇರಣೆ ಎಂದು ತಿಳಿಸಿದರು.
Advertisement
ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಸ್ಥಾನ ನೀಡಿದ್ದಕ್ಕೆ ಸಂತೋಷವಿದೆ. ಬೆಳಗಾವಿಗೆ ಎರಡು ಸಂಸದೀಯ ಸ್ಥಾನ ಮತ್ತು ಒಂದು ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಎಲ್ಲೂ ಕೂಡ ಮಂತ್ರಿ ಪದವಿ ಬೇಕು ಅಂತ ಹೇಳಿಲ್ಲ. ಹೈಕಮಾಂಡ್ ಹೇಗೆ ಹೇಳುತ್ತೆ ಅದೇ ರೀತಿ ನಡೆದುಕೊಳ್ಳುತ್ತೇನೆ. ಅದರ ಚೌಕಟ್ಟಿನಲ್ಲಿ ನಾನಿದ್ದೀನಿ. ಅವರು ಏನು ಹೇಳುತ್ತಾರೋ ಅದು ನನಗೆ ಪ್ರಸಾದ. ನಾನು ನನ್ನ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv