ಶ್ರೀನಗರ: ಜಮ್ಮುವಿನಲ್ಲಿರುವ ʻಕಾಶ್ಮೀರ ಟೈಮ್ಸ್ʼ ಪತ್ರಿಕಾ ಕಚೇರಿ (Kashmir Times Office) ಮೇಲೆ ಗುರುವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (SIR) ದಾಳಿ ನಡೆಸಿದೆ.
ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎನ್ನುವ ಆರೋಪದ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಪೊಲೀಸರು ಶೋಧ ನಡೆಸುವ ವೇಳೆ AK-47 ಕಾಟ್ರಿಡ್ಜ್‌ಗಳು (AK47 Cartridges), ಪಿಸ್ತೂಲ್ ಗುಂಡುಗಳು ಹಾಗೂ ಮೂರು ಗ್ರೆನೇಡ್ ಲಿವರ್‌ಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ಬಳಿಕ ಮತ್ತೊಂದು ರ‍್ಯಾಲಿಗೆ ಅನುಮತಿ ಕೇಳಿದ ಟಿವಿಕೆ

ಘಟನೆ ಬಳಿಕ ಅಶಾಂತಿ ಸೃಷ್ಟಿಸುವುದು, ಪ್ರತ್ಯೇಕತಾ ವಾದವನ್ನ ವೈಭವೀಕರಿಸುವುದು, ಅಲ್ಲದೇ ದೇಶದ ಹಾಗೂ ಕೇಂದ್ರಾಡಳಿತ ಪ್ರದೇಶದ ಸಾರ್ವಭೌಮತ್ವಕ್ಕೆ ಮತ್ತು ಪ್ರಾದೇಶಕ್ಕೆ ಸಮಗ್ರತೆಗೆ ಧಕ್ಕೆ ತರುವ ಆರೋಪಗಳ ಮೇಲೆ ಕಾಶ್ಮೀರ ಟೈಮ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಕಾಶ್ಮೀರ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಮೂಲದ ಚೀತಾ
ಪ್ರಕರಣ ದಾಖಲಿಸಿಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೆಚ್ಚಿನ ಶೋಧ ನಡೆಸುತ್ತಿದ್ದಾರೆ. ಜೊತೆಗೆ ಪತ್ರಿಕಾ ಕಚೇರಿಯು ಹೊಂದಿರುವ ಇತರ ಲಿಂಕ್‌ಗಳ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.
ʻಕಾಶ್ಮೀರ ಟೈಮ್ಸ್ʼ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಳೆಯ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ವೇದ್ ಭಾಸಿನ್ ಈ ಪತ್ರಿಕೆಯನ್ನ ಸ್ಥಾಪಿಸಿದರು. 1954ರಲ್ಲಿ ವಾರಪತ್ರಿಕೆಯಾಗಿ ಪ್ರಕಟಿಸಲಾಯಿತು, ನಂತರ 1964 ರಲ್ಲಿ ದಿನಪತ್ರಿಕೆಯಾಗಿ ಪರಿವರ್ತನೆಗೊಂಡಿತು. ಇದನ್ನೂ ಓದಿ: ದೆಹಲಿ ಸ್ಫೋಟ | ಇಬ್ಬರು ವೈದ್ಯರು ಸೇರಿ ನಾಲ್ವರು ಅರೆಸ್ಟ್, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

