ರಾಜೀನಾಮೆಯಿಂದ ಹಿಂದೆ ಸರಿದ ಶಾಸಕ ಕೆ.ಸುಧಾಕರ್: ದಿಢೀರ್ ನಿರ್ಧಾರ ಬದಲಿಸಿದ್ದು ಯಾಕೆ?

Public TV
1 Min Read
sudhakar

ಬೆಂಗಳೂರು: ಗುರುವಾರ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರೊಬ್ಬರು ನನ್ನ ಚಾರಿತ್ರ್ಯವಧೆ ಮಾಡಿದ್ದರು. ನನ್ನ ರಾಜಕೀಯ ಜೀವನದಲ್ಲಿ ಈ ರೀತಿ ಕ್ಷಣ ಬರುತ್ತೆ ಅಂದುಕೊಂಡಿರಲಿಲ್ಲ. ಈ ರೀತಿ ಸ್ಥಿತಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಎಲ್ಲ ಹಿರಿಯರ ಮಾತಿಗೆ ಬೆಲೆ ಕೊಟ್ಟು ನನ್ನ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡೆದಿದ್ದೇನೆ ಎಂದು ಶಾಸಕ ಕೆ.ಸುಧಾಕರ್ ತಿಳಿಸಿದ್ದಾರೆ.

vlcsnap 2017 07 07 08h02m19s363

ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಪಂಚಾಯತ್ ಸಭೆ ಆಗದಂತೆ ತಡೆದಿದ್ದಾರೆ. ಶಾಸಕರ ತಂದೆ ಅಂತಾ ನೆಪವೊಡ್ಡಿ ನಮ್ಮ ತಂದೆಯನ್ನು ಅಧ್ಯಕ್ಷರಾಗಿ ಮಾಡಿಲ್ಲ. ಏಕಾಏಕಿ ತಪ್ಪು ಮಾಡದೇ ಸ್ಥಾನದಿಂದ ಕೆಳಗೆ ಇಳಿಸಲು ಮುಂದಾಗಿದು ತಪ್ಪು. ಈ ಎಲ್ಲಾ ಬೆಳವಣಿಗೆಯಿಂದ ನನಗೆ ಬೇಸರವಾಗಿತ್ತು. ರಾಜಕೀಯ ನನಗಲ್ಲ ಎಂದು ಅನ್ನಿಸಿತು. ಕಳೆದ 15 ವರ್ಷಗಳಲ್ಲಿ ನನ್ನ ಮೇಲೆ ಕಲ್ಲು ಎಸೆಯೋ ಪ್ರಯತ್ನ ನಡೆದಿದೆ. ಇದನ್ನ ವಿರೋಧ ಪಕ್ಷ ಮಾಡಿದ್ರೆ ಎದುರಿಸುತ್ತಿದ್ದೆ. ಆದರೆ ನಮ್ಮ ಪಕ್ಷದವ್ರೇ ಮಾಡಿದ್ದರಿಂದ ಮನಸ್ಸಿಗೆ ನೋವಾಗಿದೆ ಎಂದು ಸುಧಾಕರ್ ಬೇಸರ ವ್ಯಕ್ತಪಡಿಸಿದ್ರು.

vlcsnap 2017 07 07 08h02m52s728

ಕಲುಷಿತ ರಾಜಕಾರಣದಲ್ಲಿ ಮಿನುಗುತಾರೆಯಾಗಿ ಕೆಲಸ ಮಾಡಬೇಕಿದೆ. ಜನರ ಒಳಿತಿಗಾಗಿ ನನ್ನ ನೋವನ್ನು ತ್ಯಾಗ ಮಾಡಿದ್ದೇನೆ. ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡುವ ಕೆಲಸ ಯಾವತ್ತಿಗೂ ಮಾಡಲ್ಲ. ಸಂಸದ ಮೊಯ್ಲಿ ಅವರ ಮನೆಗೆ ಕಲ್ಲು ಹೊಡೆಯುವ ಕೆಲಸ ಮಾಡಬಾರದಿತ್ತು. ಮೊಯ್ಲಿ ಅವರಿಗೂ ನನಗೂ ವೈಯುಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಈ ಅಹಿತಕರ ಘಟನೆಗೆ ಕಾರ್ಯಕರ್ತರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *