ಬೆಂಗಳೂರು: ಬಳ್ಳಾರಿ ಫೈರಿಂಗ್ ಮತ್ತು ಬ್ಯಾನರ್ ಗಲಾಟೆಗೆ (Bellari Banner Riot) ಸಂಬಂಧಿಸಿದಂತೆ ವಿಧಾನಸಭೆ ಇಂದು ಶಾಸಕರಾದ ಬಿ. ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ (Janardhana Reddy) ನಡುವೆ ಪರಸ್ಪರ ಮಾತಿನ ಫೈರಿಂಗ್‌ಗೆ ವೇದಿಕೆಯಾಗಿತ್ತು.
ನಿನ್ನೆ ಜನಾರ್ದನ ರೆಡ್ಡಿಯವರು ಸದನದಲ್ಲಿ ಬಳ್ಳಾರಿ ಗಲಾಟೆಗೆ (Ballari Clash) ನಾರಾ ಭರತ್ ರೆಡ್ಡಿ ಕಾರಣ, ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಗನ್‌ಮ್ಯಾನ್‌ಗಳು ಕಾರಣ, ಪ್ರಕರಣ ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದ್ರು. ಇಂದು ಶಾಸಕ ಬಿ ನಾಗೇಂದ್ರ ಮಾತಾಡಿ, ಜನಾರ್ದನ ರೆಡ್ಡಿಯವರು ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಪ್ರಕರಣದ ವಿವರಣೆ ಕೊಡಲು ಮುಂದಾದ್ರು. ಇದನ್ನೂ ಓದಿ: ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ
ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿ ನಾಗೇಂದ್ರಗೂ ತೀವ್ರ ವಾಕ್ಸಮರ ನಡೆದು ಸದನ ಗದ್ದಲ, ಕೋಲಾಹಲದಲ್ಲಿ ಮುಳುಗಿತ್ತು. ಮೊದಲು ಮಾತಾಡಿದ ಬಿ ನಾಗೇಂದ್ರ, ರೆಡ್ಡಿ ಮನೆ ಮುಂದೆ ಗಲಾಟೆ ಆದಾಗ ಬಿಜೆಪಿ ಕಾರ್ಯಕರ್ತರು ವಾಲ್ಕೀಕಿ ಫೋಟೋ ಇದ್ದ ಬ್ಯಾನರ್ ಕೆಳಕ್ಕೆ ಹಾಕಿ ಅವಮಾನ ಮಾಡಿದ್ರು. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಾಯ್ತು. ಯಾರು ಕಾರಣ ಅಂತ ತನಿಖೆಯಲ್ಲಿ ಬಹಿರಂಗ ಆಗುತ್ತೆ. ಆದ್ರೆ ನಂತರ ಬಿಜೆಪಿ ನಾಯಕರ ಬಳ್ಳಾರಿಯಲ್ಲಿ ಸಮಾವೇಶದಲ್ಲಿ ಶ್ರೀರಾಮುಲು ಅವರು ಏ ಭರತ್ ರೆಡ್ಡಿ, ಏಯ್ ಕಾಂಗ್ರೆಸ್ ಕಾರ್ಯಕರ್ತರೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೀವೆಲ್ಲಿದ್ರೂ, ಪಾತಾಳದಲ್ಲಿದ್ರೂ ಹುಡುಕಿ ಒದ್ದು ಓಡಿಸ್ತೇವೆ ಅಂದ್ರು.
ಜನಾರ್ದನ ರೆಡ್ಡಿಯವರು ನಿನ್ನೆ ಹಲವು ಸುಳ್ಳು ಹೇಳಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮಧ್ಯೆ ಎದ್ದು ಜನಾರ್ದನ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ನಾಗೇಂದ್ರ ವಿರುದ್ಧ ರೆಡ್ಡಿ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮಂಡ್ಯದ ಗ್ರಾಮ ಪಂಚಾಯ್ತಿ ಇ-ಖಾತೆಗಳಲ್ಲಿ ಅಕ್ರಮ
ವಾಲ್ಮೀಕಿ ಸಮಾಜದಲ್ಲಿ ರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿರೋ ನಿನಗೆ ವಾಲ್ಮೀಕಿ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ನೂರು ಜನ್ಮ ಹುಟ್ಟಿ ಬಂದರು ನೀನು ನಾಯಕನಾಗೋಕೆ ಸಾಧ್ಯವಿಲ್ಲ ಗುಡುಗಿದರು. ಇದಕ್ಕೆ ನಾಗೇಂದ್ರ ವಾಲ್ಮೀಕಿ ನಮ್ಮ ಸಮಾಜ, ನಮ್ಮ ಜನರು ನನ್ನ ಜೊತೆಗಿದ್ದಾರೆ ಎಂದು ಹೇಳಿ ರೊಚ್ಚಿಗೆದ್ದು ಮೇಜು ಕುಟ್ಟಿ ಸವಾಲು ಸ್ವೀಕರಿಸಿ ತಿರುಗೇಟು ನೀಡಿದರು.
ಈ ವೇಳೆ, ಸದನದಲ್ಲಿ ವಾಕ್ಸಮರದ ಕಾವು ಜೋರಾಗಿ, ಪರಿಸ್ಥಿತಿ ನಿಯಂತ್ರಿಸಲು ಸ್ಪೀಕರ್ ಹರಸಾಹಸ ಪಡಬೇಕಾಯಿತು. ಇಷ್ಟಕ್ಕೆ ಸುಮ್ಮನಾಗದ ಜನಾರ್ದನ ರೆಡ್ಡಿ ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕೋಕೆ ಮುಂದಾದ್ರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದ್ರೆ ನೀನು ಅದನ್ನೆ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದ್ರೆ ಹೇಗೆ? ಎಂದು ನಾಗೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೆಡ್ಡಿ ಹಾಗೂ ಬಿ.ನಾಗೇಂದ್ರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪಕ್ಕೆ ತಿರುಗಿತು.
ಇದನ್ನು ನಿಯಂತ್ರಣ ಮಾಡಲು ಸ್ಪೀಕರ್ ಯು.ಟಿ ಖಾದರ್ ಹರಸಾಹಸ ಪಡುವಂತಾಯಿತು. ಜನಾರ್ದನ ರೆಡ್ಡಿ ಅವರನ್ನು ಸುಮ್ಮನಾಗಿಸಲು ಸ್ಪೀಕರ್ ಖಾದರ್, ಸುನೀಲ್ ಕುಮಾರ್ ಅವರಲ್ಲಿ ಮನವಿ ಮಾಡಿದ ಪ್ರಸಂಗ ನಡೆಯಿತು.


