ಕೊಪ್ಪಳ: ಜಿಲ್ಲೆಯ ಕನಕಗಿರಿಯ ಮಕ್ಕಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ(ಸಿಡಿಪಿಓ)ಯೊಬ್ಬ ನನಗೆ ಶಾಸಕರೇ ದೇವರು, ಅವರು ಹೇಳಿದರೇ ಮಾತ್ರ ಇಲ್ಲಿಂದ ಹೋಗುತ್ತೇನೆಂದು ದರ್ಪ ಮೆರೆಯುತ್ತಿದ್ದಾರೆ.
ಹೌದು, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕನಕಗಿರಿ ಶಾಸಕ ಬಸವರಾಜ್ ದಡೇಸುಗುರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇವರ ಹೆಸರನ್ನು ಹೇಳಿಕೊಂಡು ಸಿಡಿಪಿಓ ಅಧಿಕಾರಿಯೊಬ್ಬ ದರ್ಪ ಮೆರೆಯುತ್ತಿದ್ದಾರೆ.
Advertisement
Advertisement
ಕಳೆದ ಒಂದು ತಿಂಗಳ ಹಿಂದೆ ಕನಕಗಿರಿ ಸಿಡಿಪಿಓ ಆಗಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಅವರನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ವೆಂಕಟ್ ರಾಜು ವರ್ಗಾವಣೆ ಮಾಡಿದ್ದರು. ಅಲ್ಲದೆ ಆ ಜಾಗಕ್ಕೆ ವಿನಾಯಕ ಅಗಸಿಯವರನ್ನು ನೇಮಕ ಮಾಡಿದ್ದರು. ಆದರೆ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಮಾತ್ರ ಸಿಇಓ ಆದೇಶವನ್ನು ಧಿಕ್ಕರಿಸಿ ವಿನಾಯಕ್‍ಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. 1 ತಿಂಗಳಿಂದ ವಿನಾಯಕ್‍ಗೆ ಯಾವುದೇ ರಿಜಿಸ್ಟರ್ ನೀಡದೆ ಸಿಡಿಪಿಓ ಕಚೇರಿಯ ಬೀಗ ಹಾಕಿಕೊಂಡು ತಿರುಗಾಡುತ್ತಿದ್ದಾರೆ.
Advertisement
ರೌಡಿಗಳ ಮೂಲಕವೂ ಬೆದರಿಕೆ ಹಾಕುವ ಕೆಲಸಕ್ಕೆ ವಿರೂಪಾಕ್ಷಿ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ವ್ಯಕ್ತಿಯೊಬ್ಬರ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಬೇಕಾದರೆ, ನನಗೆ ಶಾಸಕರ ಬೆಂಬಲವಿದೆ. ಅವರು ಹೇಳಿದರೆ ಮಾತ್ರ ನಾನು ಇಲ್ಲಿಂದ ಹೋಗುತ್ತೀನಿ ಎಂದು ದರ್ಪದಿಂದ ಮಾತನಾಡಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಬಸವರಾಜ್ ದಡೇಸುಗೂರು ಮಾತ್ರ ವಿರೂಪಾಕ್ಷಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ.
Advertisement
ಆಡಿಯೋ ಸಂಭಾಷಣೆಯಲ್ಲಿ ಏನಿದೆ?
ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೆನ್ ಸಿಎಮ್ಮಾ? ಇಲ್ಲಾ ವರ್ಲ್ಡ್ ಫೇಮಸ್ಸಾ? ಏನ್ ಹೇಳ್ರಿ, ಅವರೇನ್ ಹೇಳ್ರಿ? ನನಗೇನು ಗೊತ್ತಿಲ್ಲ. ನಮ್ಮ ಮನ್ಯಾಗ ಯಾರು ರಾಜಕೀಯದವ್ರಿಲ್ಲ, ಯಾರು ಲಾಯರ್ ಇಲ್ಲ. ನಮ್ಮ ಮನೇಲಿ ಸಿಬಿಐ ಆಫೀಸರ್ ಆಗಿ ರಿಟೈರ್ಡ್‍ಮೆಂಟ್ ಆಗ್ಯಾರಾ. ಸಿಬಿಐ ಇಲಾಖೆದಾಗ.
ಬಸವರಾಜ್ ಪೊನ್ನಾಪುರ: ಹ..ಹ..
ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೇನ್ ಹುಲಿ ಕಟ್ಯಾರ. ಕರಡಿ ಕಟ್ಯಾರ. ಏನ್ರೀ ಏನ್ಮಾಡ್ತಾರ್ ಹೇಳ್ರಿ.
ಬಸವರಾಜ್ ಪೊನ್ನಾಪುರ: ಇವಾಗ ನಾವ್ ಬೆಂಬಲ ಮಾಡ್ಬೇಕಲ್ಲ. ನಾನ್ ಯಾರಾದ್ರೂ ಒಬ್ರು ಹೊಂದಾಣಿಕೆ ಮಾಡಿಕೊಂಡಿ ಹೋಗ್ರಿ ಅಂತಾ ಹೇಳಿದ್ನ ಅಥವಾ ನಿನ್ ಬಿಟ್ಟು ಹೋಗು ಅಂತಾ ಹೇಳಿದ್ನ.? ಸರಿ ನಂದ್ ಬಿಡು ನೀನ್ಯಾರ್ ಫಾರ್(ಪರವಾಗಿ) ಅದಿ ಹೇಳ್..
ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ನಾನ್ ಎಂ.ಎಲ್.ಎ ಫಾರ್ ಅದೀನಿ.
ಬಸವರಾಜ್ ಪೊನ್ನಾಪುರ: ನಿನ್ ಎಂ.ಎಲ್.ಎ ಫಾರ್ ಅದಿ ಏನ್?
ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಹೌದು ನೂರಕ್ಕೆ ನೂರು ಎಂ.ಎಲ್.ಎ ಫಾರ್ ನಾನು..
ಬಸವರಾಜ್ ಪೊನ್ನಾಪುರ: ಓಕೆ ಅಂದ್ರೆ ಉಳಿದವ್ರು ಸಂಬಂಧ ಇಲ್ಲ ನಿಂಗೆ. ಎಂಎಲ್‍ಎ ಇದ್ರ ಸಾಕು.. ಜಿಲ್ಲಾಪಂಚಾಯಿತಿ ಅವರು ಏನ್ ಲೆಕ್ಕಕ್ಕೆ ಇಲ್ಲ ಹಂಗಾರ?
ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಜಿಲ್ಲಾಪಂಚಾಯಿತಿ ಅವರು ಏರಿಯಾದಾಗ ಅಷ್ಟೇ. ಎಂಎಲ್‍ಎ ಎಲ್ಲಾ ಕಡೆ ಬರ್ತಾರ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv