ಕೊಪ್ಪಳ: ಸಾಧನಾ ಸಂಭ್ರಮಕ್ಕೆ ಹಣ ಹಂಚಿ ಜನರನ್ನು ಕರೆಸಲು ಶಾಸಕ ಇಕ್ಬಾಲ್ ಅನ್ಸಾರಿ ಮುಂದಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ
ಕೊಪ್ಪಳದ ಗಂಗಾವತಿಯಲ್ಲಿ ಗುರುವಾರದಂದು ನಡೆಯಲಿರುವ ಸಾಧನಾ ಸಂಭ್ರಮಕ್ಕೆ ಜನರನ್ನು ಕರೆತರಲು ಗ್ರಾಮಗಳಿಗೆ ತೆರಳಿ ಶಾಸಕರ ಪುತ್ರ ಮತ್ತು ಬೆಂಬಲಿಗರಿಂದ ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ಹಣ ಕೊಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಕ್ಬಾಲ್ ಅನ್ಸಾರಿ ಫ್ಯಾನ್ಸ್ ಪೇಜ್ ನಲ್ಲಿ ಕಾರ್ಯಕರ್ತರ ಫೋಟೋಗಳನ್ನ ಶೇರ್ ಮಾಡಿದ್ದಾರೆ.
Advertisement
ಶಾಸಕ ಇಕ್ಬಾಲ್ ಅನ್ಸಾರಿ ಪುತ್ರ ಇಮ್ತಿಯಾಜ್ ಹಾಗೂ ಬೆಂಬಲಿಗರಿಂದ ಹಣ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿಸಲು ಶಾಸಕರು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಸೇರುವ ಮುನ್ನ ಶಕ್ತಿ ಪ್ರದರ್ಶನಕ್ಕೆ ಶಾಸಕ ಮುಂದಾಗಿದ್ದಾರೆ.
Advertisement
Advertisement
Advertisement