ಮಂಗಳೂರು: ಬೆಳ್ತಂಗಡಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿರೋ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಂಪೂರ್ಣ ಮನೆಯನ್ನು ಕಿತ್ತೊಗೆದ ಘಟನೆ ನಡೆದಿದೆ.
ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ಅರಣ್ಯ ತಪ್ಪಲಿನಲ್ಲಿ ಕಳೆದ ಹಲವಾರು ವರ್ಷದಿಂದ ಸುಮಾರು 200 ಕ್ಕೂ ಅಧಿಕ ಮನೆಗಳಿದ್ದು ಲೋಲಾಕ್ಷ ಎಂಬವರು ತನ್ನ ಗುಡಿಸಲಿನಂತಿದ್ದ ಮನೆಯನ್ನು ತೆಗೆದು ಹೊಸ ಮನೆ ನಿರ್ಮಿಸುತ್ತಿದ್ದರು.
Advertisement
Advertisement
ಅರಣ್ಯ ಇಲಾಖೆಯ ಕಾನೂನಿನಂತೆ ಹೊಸ ಮನೆ ನಿರ್ಮಾಣ ಅವಕಾಶವಿಲ್ಲದಿದ್ದು, ಏಕಾಏಕಿ ಮನೆಯನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಹೀಗಾಗಿ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಅವರ ಸಮ್ಮುಖದಲ್ಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಇದನ್ನೂ ಓದಿ: ಎಮರ್ಜೆನ್ಸಿ ಅಲರ್ಟ್- ಲಕ್ಷಾಂತರ ಫೋನ್‌ಗಳಿಗೆ ಸರ್ಕಾರದಿಂದ ಬಂತು ಮೆಸೇಜ್
Advertisement
Advertisement
ಶಾಸಕ ಪೂಂಜಾ ಸೂಚನೆಯಂತೆ ಮನೆ ಕಾಮಗಾರಿ ಆರಂಭಿಸಿದ 11 ಮಂದಿ ಸ್ಥಳೀಯರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಾಧಿಕಾರಿ ಜಯಪ್ರಕಾಶ್ ನೀಡಿದ ದೂರಿನಂತೆ ಅರಣ್ಯ ಒತ್ತುವರಿ,ಅಕ್ರಮ ಪ್ರವೇಶ ಹಾಗೂ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ದೂರು ದಾಖಲಾಗಿದೆ.
Web Stories