ಬೆಂಗಳೂರು: ಹಿಂದೆ ಸಚಿವರಿಗೆ ಕೆಂಪು ಗೂಟದ ಕಾರು ಕ್ರೇಜ್ ಇತ್ತು. ಈಗ ಪೊಲೀಸರ ಎಸ್ಕಾರ್ಟ್ ಗಾಡಿಯಂತೆ ಸೈರನ್ ಹಾಕ್ಕೊಂಡು ಮುಂದೆ ಹೋಯ್ತಾ ಇರಬೇಕು. ನಾವು ಸ್ಟೈಲ್ ಆಗಿ ಹಿಂದುಗಡೆ ದೊಡ್ಡ ಗಾಡಿಲಿ ಕೂತಿರಬೇಕು. ಜನರ ಅಟೆನ್ಶನ್ ಎಲ್ಲಾ ನಮ್ ಕಡೆ ಇರಬೇಕು ಅಂತ ಬಯಸೋ ಮಿನಿಸ್ಟ್ರುಗಳೇ ಹೆಚ್ಚು. ಆದರೆ ಇಂದು ಬೆಳ್ಳಂಬೆಳಗ್ಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಮಹಾಲಕ್ಷ್ಮಿ ಲೇಔಟ್‍ನ ಶಾಸಕ ಗೋಪಾಲಯ್ಯನ ಅದ್ಧೂರಿತನ ನೋಡಬೇಕಿತ್ತು. ಜಸ್ಟ್ ಮನೆಯಿಂದ ದೇವಾಸ್ಥಾನಕ್ಕೆ ಐದು ನಿಮಿಷ ನಡ್ಕೊಂಡು ಹೋದ್ರೂ ರೀಚ್ ಆಗಿರೋರು. ಆದರೆ ಖಾಕಿ ವಾಹನ ಬೆಂಗಾವಲು, ಪೊಲೀಸರ ಸೈರನ್ ಕೂಡ ಇತ್ತು.
Advertisement
ಹೌದು. ಸಚಿವರಾಗುವ ಮುನ್ನವೇ ಗೋಪಾಲಯ್ಯನವರಿಗೆ ಖಾಕಿ ಟೀಮ್ ಸಿಗ್ನಲ್ ಭಾಗ್ಯ ಕರುಣಿಸಿತು. ಗೋಪಾಲಯ್ಯ ಹೋದ ಕಡೆಯಲೆಲ್ಲ ಸೈರನ್ ಸೌಂಡೇ ಸೌಂಡು. ಹಿಂದೆ ಪರಮೇಶ್ವರ್ ಈ ಝೀರೋ ಟ್ರಾಫಿಕ್ ಕ್ರೇಜ್‍ಗೆ ಬಿದ್ದು ನೆಗೆಟಿವ್ ಇಮೇಜ್ ಬೆಳೆಸಿಕೊಂಡಿದ್ದರು. ಹೊಸಬರಿಗೆ ಇದೆಲ್ಲ ಬೇಕಾ ಅಂತ ಕೆಲವರು ಮಾತಾಡಿಕೊಂಡ್ರೆ, ಇತ್ತ 60 ದಿನ ಕಾದಿಲ್ವೇ, ರೆಸಾರ್ಟಿನಲ್ಲಿ ಕದ್ದು ಮುಚ್ಚಿ ಎಲ್ಲಾ ಇದ್ದಿರಲಿಲ್ವೇ. ಹೀಗಾಗಿ ಈಗ ರಾಜಮರ್ಯಾದೆ ಅನುಭವಿಸ್ತೀನಿ.. ಇದ್ ನನ್ ಟೈಂ ಅಂತ ಗೋಪಾಲಯ್ಯ ಕಣ್ಣು ಹೇಳುತ್ತಿತ್ತು.