ಬೆಂಗಳೂರು: ರಾಜಾಜಿನಗರದಲ್ಲಿರುವ ಮೋದಿ ಆಸ್ಪತ್ರೆಯ ಆಸ್ತಿಯನ್ನು ಕಬಳಿಸಲು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯನವರು ಸಂಚು ಮಾಡುತ್ತಿರೋದಾಗಿ ಎಂಸಿ ಮೋದಿ ಅವರ ತಮ್ಮನ ಮಗ ಸುಭಾಷ್ ಮೋದಿ ಆರೋಪಿಸಿದ್ದಾರೆ.
Advertisement
ರಾಜಾಜಿನಗರದಲ್ಲಿರುವ ಪ್ರಸಿದ್ಧ ಮೋದಿ ಕಣ್ಣಿನ ಆಸ್ಪತ್ರೆಯ ಆಡಳಿತ ಅಧಿಕಾರಿ ನಂಜುಂಡಪ್ಪ ಮತ್ತು ಸುಭಾಷ್ ಮೋದಿ ನಡುವೆ ಆಸ್ಪತ್ರೆಯ ಆಸ್ತಿಗಾಗಿ ಹೋರಾಟ ನಡೆಯುತ್ತಿದೆ. ಈ ನಡುವೆ ವಿವಾದದಲ್ಲಿ ಸಂಬಂಧವೇ ಪಡದ ಶಾಸಕ ಗೋಪಾಲಯ್ಯ ಎಂಟ್ರಿ ಕೊಟ್ಟಿದ್ದಾರೆ. ಸುಮಾರು 30-40 ಮಂದಿ ಬೆಂಬಲಿಗರೊಂದಿಗೆ ಸುಭಾಷ್ ಮೋದಿ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದಾರೆ. ಶಾಸಕರ ದಾಂಗುಡಿ ನೋಡಿದ ಸುಭಾಷ್ ಮೋದಿ ಅವರು ಬಾಗಿಲು ಮುಚ್ಚಿದ್ದಾರೆ. ಶಾಸಕರು ಮಧ್ಯೆ ಪ್ರವೇಶಿಸಿರೋದು ಮೋದಿ ಆಸ್ಪತ್ರೆಯ ಆಸ್ತಿಗಾಗಿ ಎಂದು ಆರೋಪಿಸಿದ್ದಾರೆ.
Advertisement
Advertisement
ಆಸ್ಪತ್ರೆ ಆಸ್ತಿ-ಪಾಸ್ತಿಗಳನ್ನು ನನ್ನ ಸುಪರ್ದಿಗೆ ಕೊಡಿ ಅಂತಾ ಶಾಸಕ ಗೋಪಾಲಯ್ಯ ಬೆದರಿಕೆ ಹಾಕಿದ್ದಾರೆ. ಫೆಬ್ರವರಿಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ಆಧರಿಸಿ ಸುಭಾಷ್ ಮೋದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಮಾತ್ರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
Advertisement
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರೋ ಶಾಸಕ ಗೋಪಾಲಯ್ಯ, ಸುಭಾಷ್ ಮೋದಿ ಅವರು ಮೋದಿಯ ಸಂಬಂಧಿಯೇ ಅಲ್ಲ. ಈ ಆರೋಪದಲ್ಲಿ ಏನಾದ್ರೂ ಸತ್ಯವಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದ್ರು.