ಶಿವಮೊಗ್ಗ: ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪೊಲೀಸ್ ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆತ್ಮಹತ್ಯೆಗೆ ಯತ್ನಿಸಿರುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, 5 ವರ್ಷದಿಂದ ನಮ್ಮ ತಾಲೂಕಿನಲ್ಲಿ ಪ್ರತಿದಿನ 100 ರಿಂದ 150 ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಮರಳು ಲೋಡ್ ಆಗುತ್ತಿತ್ತು. ಪೊಲೀಸ್ ಇಲಾಖೆಯೂ ಒಂದು ಟಿಪ್ಪರಿಗೆ 1 ಲಕ್ಷ ರೂ. ಫಿಕ್ಸ್ ಮಾಡಿತ್ತಂತೆ. ಸಬ್ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್‍ಪಿ ಮತ್ತು ಆಗಿ ಎಸ್‍ಪಿಗಳು ಈ ಹಣವನ್ನು ಫಿಕ್ಸ್ ಮಾಡಿದ್ದರಂತೆ. 2, 3 ಬಾರಿ ನಾನೇ ಸ್ವತಃ ಹೋಗಿ ಹಿಡಿದ್ರೆ 2, 3 ಟಿಪ್ಪರ್ ಗಳು ಸಿಗುತ್ತಿದ್ದವು. ವ್ಯವಸ್ಥಿತವಾಗಿ ಅವುಗಳು ಹೋಗುತ್ತಿದ್ದವು ಅಂತ ತಿಳಿಸಿದ್ದಾರೆ.
Advertisement
Advertisement
ನಾನು ಶಾಸಕನಾದ ಬಳಿಕ ಅವಾಗದಿಂದ ಇವಾಗಿನವರೆಗೂ ಮರಳು ಸಾಮಾನ್ಯ ಜನ, ಮನೆ ಕಟ್ಟುವವರಿಗೆ, ಬಡವರಿಗೆ ಹಾಗೂ ದೇವಸ್ಥಾನಗಳನ್ನು ಕಟ್ಟಲು ಮರಳು ಸಿಗುತ್ತಿಲ್ಲ. ಮರಳನ್ನೆಲ್ಲ ಈವಾಗ ಸಿಗದಂತೆ ಮಾಡಿಬಿಟ್ಟಿದ್ದಾರೆ. ಹೀಗಾಗಿ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
Advertisement
ಕೆರೆ ಕುಂಟೆಗಳಲ್ಲಿ ಸಿಗುವ ಮಣ್ಣನ್ನು ಮನೆ ಕಟ್ಟಲೆಂದು ತೆಗೆದುಕೊಂಡು ಬಂದವರ ಮೇಲೆ ಕೇಸ್ ಹಾಕ್ತಾರೆ. ನಮಗೆ ಕೆಟ್ಟ ಹೆಸರು ಬರಲೆಂದು ಒಂದೇ ಒಂದು ಉದ್ದೇಶ ಹಾಗೂ ಪೊಲೀಸಿನವರಿಗೆ ದುಡ್ಡು ಸಿಗಲ್ಲ ಅನ್ನುವ ಉದ್ದೇಶದಿಂದ ನಾವು ಆಪಾದನೆ ಮಾಡಲು ಆರಂಭಿಸಿದ ಬಳಿಕ ಬೇಕಂತಲೇ ಅವರು ಪೊಲೀಸ್ ಡ್ಯೂಟಿ ಮಾಡೋದು ಬಿಟ್ಟು ಟ್ರ್ಯಾಕ್ಟರ್ ಗಳನ್ನು ಬೆನ್ನತ್ತೋದು, ಸಾಮಾನ್ಯ ಜನರಿಗೆ ತೊಂದರೆ ಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಅಲ್ಲದೇ ಡಬಲ್ ಕೇಸ್ ಕೂಡ ಹಾಕುತ್ತಿದ್ದಾರೆ ಅಂತ ಅವರು ಆರೋಪಿಸಿದ್ರು. ಇದನ್ನೂ ಓದಿ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ
Advertisement
ನಾನು ಬರುತ್ತಾ ಪೆಟ್ರೋಲ್ ಬಂಕ್ ನಲ್ಲಿ 1 ಲೀಟರ್ ಪೆಟ್ರೋಲ್ ತೆಗೆದುಕೊಂಡೆ. ಅಲ್ಲಿ ಸ್ವಲ್ಪ ದೂರ ಬಂದು ಬೆಂಕಿ ಪೊಟ್ಟಣ ತೆಗೆದುಕೊಂಡೆ. ಅವಾಗಲೇ ನನಗೆ ಸಿಟ್ಟು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏನಪ್ಪಾ ಇದು ಪ್ರತಿ ಬಾರಿಯೂ ಶಾಸಕರನ್ನು ಕೆಲಸ ಮಾಡಲು ಬಿಡೋದೇ ಇಲ್ಲ. ಬರೀ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅನಿಸಿತ್ತು.
1 ಲಕ್ಷ ವೋಟ್ ಹಾಕಿರುವ ಜನ ಅವರಿಗೆ ನ್ಯಾಯ ಕೊಡಿಸಬೇಕಂದ್ರೆ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಬೇಕಲ್ಲ. ವಿಧಿ ಇಲ್ಲದೇ ಈ ತೀರ್ಮಾನ ಮಾಡಿದ್ದೇನೆ. ಹೀಗಾಗಿ ಪೊಲೀಸ್ ಠಾಣೆಯ ಬಳಿ ಬಂದು ಏಕಾಏಕಿ ಆತ್ಮಹತ್ಯೆಗೆ ಮುಂದಾಗಿದ್ದೇನೆ. ನಾನು ಈ ಮೊದಲೇ ಹೇಳಿದ್ದೆ. ಹೀಗಾಗಿ ಹತಾಶನಾಗಿ ಬಂದು ಠಾಣೆಯ ಮುಂದೆ ಬಂದು ಪೆಟ್ರೋಲನ್ನು ತನ್ನ ತಲೆಯ ಮೇಲೆ ಹೊಯ್ದುಕೊಂಡೆ. ಅಷ್ಟಾಗುವಾಗಲೇ ಕೆಲವರು ಬಂದು ನನ್ನ ಜೇಬಿನಲ್ಲಿದ್ದ ಬೆಂಕಿ ಪೊಟ್ಟಣವನ್ನು ಕಿತ್ತುಕೊಂಡರು. ಆದ್ರೆ ಪೆಟ್ರೋಲ್ ಕಣ್ಣಿಗೆ ಹೋಗಿದೆ. ಹೀಗಾಗಿ ಕಣ್ಣು ಉರಿಯುತ್ತದೆ ಎಂದು ಗೂಳಿಹಟ್ಟಿ ವಿವರಿಸಿದ್ರು.
https://www.youtube.com/watch?v=A_WmrMG6F1k
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv