ತುಮಕೂರು: ಬರೀ ಸಿಟಿ ಹೆಣ್ಣು ಮಕ್ಕಳನ್ನ ಮಾತ್ರ ನೋಡಬೇಡಿ. ಗ್ರಾಮೀಣ ಹೆಣ್ಣು ಮಕ್ಕಳಿಗೂ ಜೀವವಿದೆ ಅನ್ನೋದು ಮರಿಬೇಡಿ ಎಂದು ಹೇಳುವ ಮೂಲಕ ತುಮಕೂರಿನ ಮಹಿಳೆಗೂ ನ್ಯಾಯ ಒದಗಿಸಿಕೊಡಿ ಎಂದು ಶಾಸಕ ಡಿ.ಸಿ ಗೌರಿ ಶಂಕರ್ ಆಗ್ರಹಿಸಿದರು.
Advertisement
ಜಿಲ್ಲೆಯ ಗ್ರಾಮಾಂತರದ, ಚೋಟಸಾಬರ ಪಾಳ್ಯದಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಾಂತರ ಶಾಸಕರ ನೇತೃತ್ವದಲ್ಲಿ ಇಂದು ತುಮಕೂರು ಜಿಲ್ಲಾ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾಲಹರಣ ಮಾಡಿಲ್ಲ – ಗೃಹ ಸಚಿವ ಸ್ಪಷ್ಟನೆ
Advertisement
Advertisement
ತುಮಕೂರು ವಿವಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತುಮಕೂರು ಜಿಲ್ಲಾ ಎಸ್ಪಿ ಕಚೇರಿವರೆಗೂ ಬಂದು ತಲುಪಿ, ಅಲ್ಲಿಂದ ಕಚೇರಿ ಮುಂದೆ ಸುಮಾರು ಒಂದು ಗಂಟೆಗಳಕಾಲ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ಶಾಸಕರು, ಚಾಮುಂಡಿ ಬೆಟ್ಟದಲ್ಲಿ ನಡೆದ ಗ್ಯಾಂಗ್ ರೇಪ್ ಗೆ ಸರ್ಕಾರ ಗಮನಕೊಟ್ಟು ಆರೋಪಿಗಳನ್ನ ಹಿಡಿಯಲು ಪ್ರಯತ್ನ ಮಾಡುತ್ತಿದೆ. ಇದೇ ರೀತಿಯಲ್ಲಿ ತುಮಕೂರಿನಲ್ಲಿ ನಡೆದ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಗಮನಹರಿಸಿ ತನಿಖೆ ತಂಡ ರಚಿಸಿ ಆರೋಪಿಗಳನ್ನ ಬಂಧಿಸಬೇಕು. ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ
Advertisement
ಮುಖ್ಯಮಂತ್ರಿಗಳೇ, ಸನ್ಮಾನ್ಯ ಗೃಹ ಮಂತ್ರಿಗಳೇ ದಯವಿಟ್ಟು ಚಾಮುಂಡಿ ಬೆಟ್ಟದಲ್ಲಿ ನಡೆದ ಪ್ರಕರಣ ಕ್ಕೆ ತಾವೇ ಖುದ್ದಾಗಿ ಹೋಗಿದಿರಿ. ದೆಹಲಿಯಿಂದ ಸಿಎಂ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಳನ್ನ ಬೇಗ ಬಂಧಿಸಿ ಅಂತ ಹೇಳಿದ್ದಿರಿ. ಬರೀ ಸಿಟಿ ಹೆಣ್ಣು ಮಕ್ಕಳನ್ನ ನೋಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಂಗ್‍ರೇಪ್ ಪ್ರಕರಣ – ಘಟನೆಯ ಬಗ್ಗೆ ಬಿಚ್ಚಿಟ್ಟ ಸಂತ್ರಸ್ತೆಯ ಸ್ನೇಹಿತ