– ನೋವುಂಡು ಜೆಡಿಎಸ್‌ನಲ್ಲೇ ಇದ್ದೀನಿ
– ಹೆಚ್.ಡಿ.ದೇವೇಗೌಡರ ಬಳಿ ಈಗ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರದ್ದೂ ನಡೆಯುತ್ತಿಲ್ಲ
ಮೈಸೂರು: ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು ಎಂದು ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಗರಂ ಆದರು.
Advertisement
ಮೈಸೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನೋವುಂಡು ಕೊಂಡು ಜೆಡಿಎಸ್‌ನಲ್ಲಿದ್ದೀನಿ. ಇನ್ನೂ ಎಷ್ಟು ದಿನ ನೋವುಂಡು ಇಲ್ಲೇ ಇರು ಅಂತಾ ನನ್ನ ಕ್ಷೇತ್ರದ ಜನ, ನನ್ನ ಕಾರ್ಯಕರ್ತರು ಹೇಳುತ್ತಾರೋ ಅಷ್ಟು ದಿನ ಇರ್ತಿನಿ. ಜನರೇ ಎಲ್ಲಾ ತೀರ್ಮಾನ ಮಾಡಲಿ. ನನ್ನ ಕಾಂಗ್ರೆಸ್‌ಗೆ ಕಳಿಸೋಕೆ ಜೆಡಿಎಸ್ ನಾಯಕರು ಯಾರು? ನಾನೇನೂ ಪಕ್ಷ ಬಿಡ್ತೀನಿ ಅಂತಾ ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
Advertisement
Advertisement
ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು? ಸಿ.ಪಿ. ಯೋಗೇಶ್ವರ್‌ಗೆ ಮೊದಲೇ ಟಿಕೆಟ್ ಘೋಷಿಸಿದ್ದರೆ, ಇವತ್ತು ಈ ಪರಿಸ್ಥಿತಿ ಬರ್ತಿತ್ತಾ ನಿಮಗೆ ಎಂದು ಜಿಟಿಡಿ ಅಸಮಾಧಾನ ಹೊರಹಾಕಿದರು.
Advertisement
ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು. ನನಗೆ ಯಾರೊಬ್ಬರು ಪ್ರಚಾರಕ್ಕೆ ಬನ್ನಿ ಎಂದು ಪೋನ್ ಮಾಡಿ ಕರೆಯಲೇ ಇಲ್ಲ. ನಾನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ. ನನಗೆ ಪ್ರಚಾರಕ್ಕೆ ಕರೆಯದಿದ್ದರೆ ಹೇಗೆ ಹೇಳಿ? ನನಗೆ ಹೇಳದೆ ಯಾವತ್ತೂ ಹೆಚ್.ಡಿ.ದೇವೇಗೌಡರು ಮೈಸೂರಿಗೆ ಬಂದವರೇ ಅಲ್ಲ. ಆದರೆ ಈಗ ಮೈಸೂರಿಗೆ ಬಂದರೂ, ನನಗೆ ಒಂದು ಮಾತು ಹೇಳುತ್ತಿಲ್ಲ. ಇಷ್ಟು ಬೇಡವಾಗಿದ್ದೇನೆ. ನಾನು ಯಾವ ತಪ್ಪು ಮಾಡಿದ್ದೇನೆ ಹೇಳಿ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಕುಮಾರಣ್ಣ ಕುಮಾರಣ್ಣ ಅಂತಾ ಮೊದಲು ಅಚ್ಚೆ ಒತ್ತಿದ್ದು ನಾನೇ. ಇದು ಕುಮಾರಸ್ವಾಮಿಗೆ ಮರೆತು ಹೋಗಿದೆ. ಯಾವುದೋ ಒಂದು ವಿಚಾರಕ್ಕೆ ಕುಮಾರಸ್ವಾಮಿ ನನ್ನ ಏಕವಚನದಲ್ಲಿ ಮನ ಬಂದಂತೆ ಬೈಯ್ದಿದ್ದರು. ಅವತ್ತೆ ಹೇಳಿದ್ದೆ ನಾನು ಹಿರಿಯ ಇದ್ದೀನಿ ಬೈಯ್ಯ ಬೇಡಿ ಅಂತಾ. ಹೆಚ್.ಡಿ.ದೇವೇಗೌಡರ ಬಳಿ ಈಗ ಕುಮಾರಸ್ವಾಮಿಯದ್ದು ಬಿಟ್ಟರೆ ಬೇರೆ ಯಾರದ್ದು ನಡೆಯುತ್ತಿಲ್ಲ. ಅವರು ಹೇಳಿದ ಜಾಗಕ್ಕೆ ದೇವೇಗೌಡರು ಸೈನ್ ಹಾಕ್ತಿದ್ದಾರೆ ಅಷ್ಟೆ ಎಂದು ಹೇಳಿದರು.
ನಾನು ಕುಮಾರಸ್ವಾಮಿಗಾಗಿ ದುಡಿದಿದ್ದನ್ನು ಅವರು ಯಾವತ್ತೂ ನೆನೆಸಿಕೊಳ್ಳಲೇ ಇಲ್ಲ. ಎಲ್ಲಾ ನಾನೇ ಮಾಡಿದ್ದು, ನಾನೇ ಮಾಡಿದ್ದು ಅಂತಾ ಕುಮಾರಸ್ವಾಮಿ ಹೇಳಿಕೊಳ್ಳುತ್ತಾರೆ. ನಾವೇನು ಅವರಿಗೆ ದುಡಿಯಲೇ ಇಲ್ವಾ? ಕಾಂಗ್ರೆಸ್ ಬಿರುಗಾಳಿಯಲ್ಲಿ ನಾನು, ನನ್ನ ಮಗ ಗೆದ್ದಿದ್ದೇವೆ. ನಾವು ಮಾಡಿಕೊಂಡ ಸಾಲ, ನಮ್ಮ ಕಷ್ಟ, ನಮ್ಮ ನೋವು, ನಮಗೆ ಮಾತ್ರ ಗೊತ್ತು ಎಂದು ನೊಂದು ನುಡಿದರು.