ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಅಜಯ್ ಸಿಂಗ್!

Public TV
1 Min Read
AJAY SINGHA

-ಮೈತ್ರಿಗೆ ತಲೆನೋವಾದ ಸಂಪುಟ ವಿಸ್ತರಣೆ

ಕಲಬುರಗಿ: ಬಂಡಾಯ ಶಾಸಕರ ಮನವೊಲಿಸಲು ಮುಂದಾದ ಮೈತ್ರಿ ನಾಯಕರಿಗೆ ಮತ್ತೊಂದು ಶಾಕ್ ಆಗಿದ್ದು, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರಿಂದ ಸಚಿವ ಸ್ಥಾನಕ್ಕಾಗಿ ಲಾಭಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ನಾವು ಸಾಧು ಸನ್ಯಾಸಿಗಳಲ್ಲ, ನಾವು ಸಚಿವ ಸ್ಥಾನದ ಆಕಾಂಕ್ಷಿ. ಈ ಹಿಂದೆ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ರಿ. ಲೋಕಸಭೆ ಬಳಿಕ ಸಚಿವ ಸ್ಥಾನ ನೀಡುವುದಾಗಿ ಹೇಳಿ ಮಾತು ಬದಲಿಸಿದ್ದೀರಿ. ಇದೀಗ ಬಂಡಾಯ ಶಾಸಕರಿಗೆ ಮಾತ್ರ ಮಣೆಹಾಕಲು ಮುಂದಾಗಿರುವುದು ಎಷ್ಟು ಸರಿ ಎಂದು ಡಾ.ಅಜಯ್ ಸಿಂಗ್ ಪ್ರಶ್ನೆ ಮಾಡಿದ್ದಾರೆ ಎಂದು ಶಾಸಕರ ಆಪ್ತರಿಂದ ಮಾಹಿತಿ ಲಭ್ಯವಾಗಿದೆ.

Congress JDS

ನಾನು ಎರಡು ಬಾರಿ ಶಾಸಕನಾಗಿ ಅನುಭವ ಹೊಂದಿದ್ದೇನೆ. ನಮ್ಮ ತಂದೆ ದಿವಗಂತ ಧರ್ಮಸಿಂಗ್ ಅವರಿಗೂ ಹಲವು ಜನ ನಿಷ್ಠ ಬೆಂಬಲಿಗರಿದ್ದಾರೆ. ಹೀಗಿರುವಾಗ ಸಚಿವ ಸ್ಥಾನ ನೀಡದಿದ್ದರೆ ನಾನು ಸಹ ಸುಮ್ಮನಿರಲ್ಲ ಎಂದು ಮೈತ್ರಿ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಅಜಯ್ ಸಿಂಗ್ ಸಚಿವ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ತಿಳಿದು ಬಂದಿದೆ.

Share This Article