Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?

Latest

ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?

Public TV
Last updated: November 13, 2019 7:17 am
Public TV
Share
3 Min Read
JUDGEMENT
SHARE

ನವದೆಹಲಿ: ಇಂದು ರಾಷ್ಟ್ರ ರಾಜಕಾರಣಕ್ಕೆ ಮಹತ್ವದ ದಿನವಾಗಿದೆ. ರಾಜಕೀಯ ಇತಿಹಾಸದಲ್ಲಿಯೂ ಮೈಲುಗಲ್ಲಾಗಿ ಉಳಿಯುವ ದಿನ. ಅನರ್ಹತೆ ಪಟ್ಟ ಹೊತ್ತ 17 ಮಂದಿ ಶಾಸಕರ ಭವಿಷ್ಯ ನಿರ್ಧಾರ ಆಗುವ ದಿನ. ಅನರ್ಹ ಶಾಸಕರ ಅಂತಿಮ ತೀರ್ಪಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ.

ಹೌದು. ಇಂದು 17 ಮಂದಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟ ಆಗಲಿದೆ. ಸುಪ್ರೀಂಕೋರ್ಟಿನ ನ್ಯಾ. ಎನ್ ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ತೀರ್ಪು ನೀಡಲಿದೆ. ಈ ತೀರ್ಪು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ರಾಷ್ಟ್ರ ರಾಜಕಾರಣದಲ್ಲಿ ಮೈಲುಗಲ್ಲು ಆಗಲಿದೆ. ಹೀಗಾಗಿ ಇಂದು ಬೆಳಗ್ಗೆ 10.30ಕ್ಕೆ ಪ್ರಕಟ ಆಗುವ ಈ ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ.

ftg rebel mla 1707.transfer.Sub .01 e1573608854450

ಅನರ್ಹರ ಭವಿಷ್ಯ ಏನಾಬಹುದು..?
ಸ್ಪೀಕರ್ ಆದೇಶವನ್ನ ಎತ್ತಿ ಹಿಡಿಯಬಹುದು. ಸ್ಪೀಕರ್ ಸಂವಿಧಾನಿಕ ಹುದ್ದೆಯನ್ನ ನಾವು ಪ್ರಶ್ನೆ ಮಾಡಲ್ಲ ಎನ್ನಬಹುದು. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಉಲ್ಲೇಖಿಸಿ ತೀರ್ಪು ನೀಡಬಹುದು. 15ನೇ ವಿಧಾನಸಭೆಯ ಅವಧಿ ಅಂತ್ಯದ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನೂ ಎತ್ತಿಹಿಡಿಯಬಹುದು. 10ನೇ ಷೆಡ್ಯೂಲ್ ಅನ್ನು ಎತ್ತಿಹಿಡಿದು ಸರ್ಕಾರದ ಹುದ್ದೆಗಳನ್ನ ಹೊಂದುವಂತಿಲ್ಲ ಎಂಬ ಆದೇಶವನ್ನೂ ಎತ್ತಿಹಿಡಿಯುವ ಸಾಧ್ಯತೆಗಳಿವೆ.

ಅನರ್ಹತೆ ಆದೇಶವನ್ನು ಎತ್ತಿಹಿಡಿದು, ಚುನಾವಣೆ ಸ್ಪರ್ಧೆಗಿರುವ ನಿರ್ಬಂಧ ತೆರವುಗೊಳಿಸಬಹುದು. ಚುನಾವಣೆ ಸ್ಪರ್ಧೆಗೆ ನಿರ್ಬಂಧ ಮಾಡುವುದು, ಬಿಡುವುದು ಆಯೋಗಕ್ಕೆ ಬಿಟ್ಟದ್ದು ಎನ್ನಬಹುದು. ಸಂವಿಧಾನಿಕ ಪೀಠ ಸ್ಪೀಕರ್ ವ್ಯಾಪ್ತಿಗೆ ಮಾತ್ರ ಅನರ್ಹತೆ ಆದೇಶ ಬರುತ್ತದೆ ಎನ್ನಬಹುದು. ಆದರೆ ಚುನಾವಣೆಗೆ ಇಷ್ಟು ವರ್ಷಗಳ ಕಾಲ ಸ್ಪರ್ಧಿಸುವುದು ಬೇಡ ಅಂತಾ ಹೇಳುವ ಅಧಿಕಾರ ಇಲ್ಲ ಎನ್ನಬಹುದು. ಅಂತಿಮವಾಗಿ ಸ್ಪೀಕರ್ ಆದೇಶ ಎತ್ತಿ ಹಿಡಿದು, ಅನರ್ಹರಿಗೂ ಸ್ವಲ್ಪ ರಿಲೀಫ್ ಕೊಡುವ ಸಾಧ್ಯತೆಗಳು ಕೂಡ ಇವೆ.

SC 3

ಸ್ಪೀಕರ್ ಅನರ್ಹತೆ ಆದೇಶವನ್ನ ರದ್ದುಗೊಳಿಸಬಹುದು. ಸ್ಪೀಕರ್ ವ್ಯಾಪ್ತಿಯ ಬಗ್ಗೆ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ಪ್ರತ್ಯೇಕ ಅನರ್ಹ ಶಾಸಕರ ವಿಚಾರದಲ್ಲಿ ಒಂದೇ ಆದೇಶ ಏಕೆ ಅಂತ ಪ್ರಶ್ನಿಸಬಹುದು. ರಾಜೀನಾಮೆ ಪುನರ್ ಪರಿಶೀಲನೆ ಮಾಡಿ ಅಂತೇಳಿ ಹಾಲಿ ಸ್ಪೀಕರ್‍ಗೆ ಆದೇಶಿಸಬಹುದು. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಬಹುದು.

ಅನರ್ಹರ ಪರ ತೀರ್ಪು ಬಂದ್ರೆ ಏನಾಗಬಹುದು..?
ಅನರ್ಹರ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು. ಗುರುವಾರೇ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಬಹುದು. ಬಳಿಕ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದು ಅಖಾಡಕ್ಕೆ ಇಳಿಯಬಹುದು. ಮುಂದೆ ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ ಮಂತ್ರಿಯೂ ಆಗಬಹುದು. ಸರ್ಕಾರದ ಬೇರೆ ಬೇರೆ ಸ್ಥಾನಗಳನ್ನ ಹೊಂದಲು ಅವಕಾಶ ಸಿಗಲಿದೆ. ಬಿಎಸ್‍ವೈ ಸರ್ಕಾರ ಸದ್ಯಕ್ಕೆ ಸ್ವಲ್ಪ ಮಟ್ಟಿನ ರಿಲೀಫ್ ಸಿಗಬಹುದು. ಉಪಚುನಾವಣೆಗೆ ಹಾದಿ ಅಷ್ಟೊಂದು ಕಠಿಣ ಆಗದಿರಬಹುದು.

SC 1

ಅನರ್ಹರ ವಿರುದ್ಧ ಬಂದ್ರೆ ಏನಾಗಬಹುದು..?
ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮುಂದಿನ ಮೂರೂವರೆ ವರ್ಷದ ತನಕ ಸಚಿವರಾಗುವಂತಿಲ್ಲ. ಸರ್ಕಾರದ ಯಾವುದೇ ಸ್ಥಾನಮಾನಗಳನ್ನ ಪಡೆಯುವಂತಿಲ್ಲ. ಸಂವಿಧಾನಿಕ ಪೀಠಕ್ಕೆ ಮತ್ತೆ ಮೇಲ್ಮನವಿಯನ್ನ ಸಲ್ಲಿಸಬಹುದು. ಚುನಾವಣೆಗೆ ತಡೆ ಸಾಧ್ಯವಾಗದಿದ್ದರೆ ತಮ್ಮ ಕುಟುಂಬದವರನ್ನ ನಿಲ್ಲಿಸಬಹುದು. ಪತ್ನಿ, ಮಕ್ಕಳನ್ನ ಬಿಜೆಪಿ ಚಿನ್ಹೆಯಡಿ ಚುನಾವಣಾ ಅಖಾಡಕ್ಕೆ ಇಳಿಸಬಹುದು. ತಮಗೆ ಮೀಸಲು ಎನ್ನುತ್ತಿದ್ದ ಸಚಿವ ಸ್ಥಾನಗಳನ್ನ ಕುಟುಂಬದವರಿಗೆ ಕೊಡಿಸಬಹುದು.

ಇಂದು ತೀರ್ಪು ಪ್ರಕಟ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.

SC 2

ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.

Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
1 hour ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
2 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
2 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
2 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
4 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?