ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಕಲಬುರಗಿಯ ಜನ ಅಕ್ಷರಶಃ ತತ್ತರಿಸಿ ಎಲ್ಲಾ ಹೋಟೆಲ್‍ಗಳನ್ನು ಬಂದ್ ಮಾಡಿದ್ದಾರೆ. ಇದರ ಪರಿಣಾಮ ಕಳೆದ ನಾಲ್ಕು ದಿನಗಳಿಂದ ನಿರ್ಗತಿಕ ಮತ್ತು ಪಾಲಿಕೆ ಪೌರ ಕಾರ್ಮಿಕರಿಗೇ ಊಟ ಸಿಗದೇ ಪರದಾಡುವಂತಾಗಿದೆ.
ಇದನ್ನು ಅರಿತ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್, ಪಾಲಿಕೆ ಅಧಿಕಾರಿಗಳ ಮುಖಾಂತರ ಎಲ್ಲಾ ನಿರ್ಗತಿಕ ಹಾಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಖುದ್ದು ಶಾಸಕರೇ ಪೌರ ಕಾರ್ಮಿಕರಿಗೆ ಊಟ ನೀಡಿ ಯೋಜನೆಗೆ ಚಾಲನೆ ನೀಡಿದ್ದಾರೆ.
Advertisement
Advertisement
ಅದಲ್ಲದೇ ಪಾಲಿಕೆಯ ಎಲ್ಲಾ 55 ವಾರ್ಡ್‍ಗಳಲ್ಲಿ ಸಹ ತರಕಾರಿಯನ್ನು ಮನೆ ಮನೆಗೆ ಕಳುಹಿಸುವ ಯೋಜನೆಗೂ ಸಹ ಚಾಲನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಯಾರು ಸಹ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಈ ಮೂಲಕ ಕೊರೊನಾ ಸೋಂಕು ತಡೆಯಲು ಎಲ್ಲರು ಸಹ ಕೈ ಜೋಡಿಸಬೇಕು ಎಂದು ಕಲಬುರಗಿ ಜಿಲ್ಲೆಯ ಜನರಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ಮನವಿ ಮಾಡಿದ್ದಾರೆ.