ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ

Public TV
1 Min Read
darshan darshan puttannaiah

ಮಂಡ್ಯ: ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡದ ರೀತಿ ತಿಳಿಸಲು ನಟ ದರ್ಶನ್ (Darshan) ಜೊತೆ ಮಾತಾಡುತ್ತೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಹೇಳಿದರು.

ಬುಧವಾರ ಮಂಡ್ಯದ ದುದ್ದದಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸದ್ಯ ದರ್ಶನ್ ಪ್ರಕರಣ ನ್ಯಾಯಾಲಯದಲ್ಲಿದೆ ಇದೆ. ನ್ಯಾಯಾಲಯದ ಮುಂದೆ ಯಾರು ದೊಡ್ಡವರಲ್ಲ. ತಪ್ಪಿತಸ್ಥರು ಯಾರು, ಅವರಿಗೆ ಶಿಕ್ಷೆ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

Ramya Vijayalakshmi Darshan

ಸಾಮಾಜಿಕ ಜಾಲತಾಣದಲ್ಲಿ ಅನಾವಶ್ಯಕವಾಗಿ ಕಾಮೆಂಟ್ ಹಾಕುವುದು ವೇಸ್ಟ್. ಕಾಮೆಂಟ್ ಮಾಡಿ ಅವರನ್ನು ಇವರನ್ನು ಬೈಯ್ಯುವುದರಿಂದ ಏನು ಆಗಲ್ಲ. ಅಭಿಮಾನಿಗಳು ಕೆಟ್ಟ ಕಾಮೆಂಟ್ ಮಾಡದಂತೆ ನಟ ದರ್ಶನ್ ಸಲಹೆ ಕೊಡಬೇಕು. ಈ ಬಗ್ಗೆ ನಾನು ದರ್ಶನ್ ಅವರ ಜೊತೆ ಮಾತಾಡುತ್ತೇನೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇದೆ. ಜಾಲತಾಣವನ್ನು ಎಲ್ಲರೂ ಪಾಸಿಟಿವ್ ಆಗಿ ಬಳಕೆ ಮಾಡಬೇಕು. ಒಂದು ಪ್ಲಾಟ್‌ಫಾರಂ ನೀಡಿ ಅವರು ಇಷ್ಟ ಬಂದಹಾಗೆ ಮಾಡೋಕೆ ಬಿಡೋಕೆ ಆಗಲ್ಲ. ಸರ್ಕಾರವೂ ಸಹ ಈ ಬಗ್ಗೆ ಗಮನಹರಿಸಬೇಕಾಗಿದೆ. ಜನರನ್ನು ಈ ಸಂಬಂಧ ಎಜುಕೇಟ್ ಮಾಡಬೇಕಾಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಇದನ್ನೂ ಓದಿ: ಕುಟುಂಬ ಸಮೇತ ಅಸ್ಸಾಂನ ಕಾಮಾಕ್ಯ ದೇವಿಯ ಹರಕೆ ತೀರಿಸಿದ ದರ್ಶನ್

Share This Article