– 48 ಸೆಕೆಂಡ್‌ಗಳ ಆಡಿಯೋದಲ್ಲಿ ಗುತ್ತಿಗೆದಾರನಿಗೆ ಶಾಸಕ ಆವಾಜ್
ಗದಗ: ಸರ್ಕಾರಿ ಕಾಮಗಾರಿಯೊಂದರ ಸಂಬಂಧ ಲಂಚ ಸ್ವೀಕರಿಸುವಾಗ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣ ಬೆನ್ನಲ್ಲೇ ಶಾಸಕ ಮತ್ತು ಗುತ್ತಿಗೆದಾರನ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಕಮಿಷನ್‌ಗಾಗಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ. 48 ಸೆಕೆಂಡ್‌ನ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: 5 ಲಕ್ಷ ಲಂಚ ಪಡೆಯುವಾಗ್ಲೇ ಸಿಕ್ಕಿಬಿದ್ದ ಬಿಜೆಪಿ ಶಾಸಕ – ನಾವ್ಯಾರು ತನಿಖೆಗೆ ಅಡ್ಡಿ ಬರಲ್ಲ ಎಂದ ಸಿಎಂ
‘ಸೊಂಟ ಮುರಿಸ್ತೀನಿ.. ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದ್ರೆ ಸೊಂಟ ಮುರಿಸ್ತೀನಿ ಅಂತ ಗುತ್ತಿಗೆದಾರನ ವಿರುದ್ಧ ಲಮಾಣಿ ಗರಂ ಆಗಿದ್ದಾರೆ. ಈ ವೇಳೆ, ಇದೊಂದು ಸಾರಿ ತಪ್ಪಾಗಿದೆ ಅಂತ ಗುತ್ತಿಗೆದಾರ ಮಾತನಾಡಿದ್ದಾರೆ.
ಆಡಿಯೋ ಸಂಭಾಷಣೆಯಲ್ಲೇನಿದೆ?
ಚಂದ್ರು ಲಮಾಣಿ: ನಾನು ಸರಳ ಅನ್ಕೊಂಡ್ರೆ ನಡಾನೆ ಮುರಿಸ್ತೀನಿ… ಪ್ರೀತಿ ವಿಶ್ವಾಸದಿಂದ ಹೇಳಿದ್ರೆ ನಾಟಕ ಮಾಡ್ತೀಯಾ…. ಸುಳ್ಳು ಹೇಳ್ತೀಯಾ ನೀನು… ಯಲ್ಲಮ್ಮ ಹೋಗಿನಿ ಮಲ್ಲಮ್ಮಗೆ ಹೋಗಿನಿ… ನಿಮ್ಮ ತಾಲ್ಲೂಕಿನಲ್ಲಿ ಮಾಡಿದಂಗೆ ನಮ್ಮ ತಾಲ್ಲೂಕಿನಲ್ಲಿ ಮಾಡಿದ್ರೆ ನಡಾ ಮುರಿಸ್ತೀನಿ.
ಗುತ್ತಿಗೆದಾರ: ಸರ್ ಇದೊಂದು ಸಾರಿ ತಪ್ಪು ಆಗಿದೆ.
ಚಂದ್ರು ಲಮಾಣಿ: ಹೇ… ಯಾರ್ ಹೆಸರಲ್ಲಿ ಇದೆ.
ಗುತ್ತಿಗೆದಾರ: ನಮ್ಮ ಹೆಸರಲ್ಲೇ ಇದೆ ಸರ್… ಎರಡು ಹೇಳಿದ್ವಿ ಸರ್… ನಿಮಗೆ ಕನ್‌ಫ್ಯೂಸ್ ಆಗಿದೆ ಸರ್…
ಚಂದ್ರು ಲಮಾಣಿ: ನನಗೇನೂ ಗೊತ್ತಿಲ್ಲ ಅನ್ಕೊಂಡಿಯಾ… ಕನ್‌ಫ್ಯೂಸ್ ಮಾಡೋಕೆ.. ಹೇ ಬಿಡೋ… ಎರಡು ಹೇಳಾನ ಅಂತಾ ನಾನ್ ಕನ್‌ಫ್ಯೂಸ್ ಆಗಿನಿ ಅಂತೆ.

